alex Certify
ಕನ್ನಡ ದುನಿಯಾ       Mobile App
       

Kannada Duniya

ಮಕ್ಕಳಾಟವಲ್ಲ! ಹಾವೇ ಇವರಿಗೆ ಆಟಿಕೆ

Eric-LeBlanc

ಕಲ್ಲುನಾಗರ ಕಂಡರೆ ಹಾಲೆರೆಯುವರು, ದಿಟ ನಾಗರ ಕಂಡರೆ ಓಡುವರು ಎಂಬ ಮಾತಿನಂತೆ ಹಾವು ಕಂಡರೆ ಸಾಕು, ದೂರಕ್ಕೆ ಸರಿಯುವುದು ಸಾಮಾನ್ಯ ಸಂಗತಿ. ಆದರೆ, ಈ ಮಕ್ಕಳು ಹಾವಿನ ಜೊತೆಯಲ್ಲೇ ಆಟವಾಡುತ್ತಾರೆ. ಅವುಗಳ ಜೊತೆಗೇ ಜೀವಿಸುತ್ತಾರೆ.

ಜಿರಲೆ, ಜೇಡ ಕಂಡರೆ ಓಡುವವರ ನಡುವೆ ಈ ಮಕ್ಕಳ ಧೈರ್ಯವನ್ನು ನಿಜಕ್ಕೂ ಮೆಚ್ಚಬೇಕು. ಕ್ಯಾಲಿಫೋರ್ನಿಯಾದ ಎರಿಕ್ ಲಿಬ್ ಲೈಕ್ ಅವರಿಗೆ ಹಾವುಗಳೆಂದರೆ ಅಚ್ಚುಮೆಚ್ಚು. ಹಾಗಾಗಿ ಮನೆಯಲ್ಲಿ ಮಕ್ಕಳಿಗೆ ಆಟದ ಸಾಮಾನುಗಳನ್ನು ಕೊಡಿಸುವ ಬದಲಿಗೆ ಜೀವಂತ ಹಾವುಗಳನ್ನೇ ಕೊಟ್ಟಿದ್ದಾರೆ. ಅವರ ಮಕ್ಕಳು ಕೂಡ ಹಾವುಗಳೊಂದಿಗೆ ಆಟವಾಡುತ್ತಾರೆ. ಅವುಗಳ ಜೊತೆಯಲ್ಲೇ ಅವರ ಆಟ, ಪಾಠ ನಡೆಯುತ್ತದೆ. ಸದಾ ಅವುಗಳ ಜೊತೆಯಲ್ಲಿಯೇ ಇರುತ್ತಾರೆ.

ಮನೆಯಲ್ಲಿ ಸಾಕುಪ್ರಾಣಿಗಳಾದ ಬೆಕ್ಕು, ನಾಯಿಯನ್ನು ಸಾಕುವುದಕ್ಕಿಂತ ಸುಲಭವಾಗಿ ಹಾವುಗಳನ್ನು ಸಾಕಬಹುದು. ಇವುಗಳನ್ನು ಹೊರಗೆಲ್ಲೂ ಕರೆದೊಯ್ಯುವಂತಿಲ್ಲ. ಸರಿಯಾಗಿ ನೋಡಿಕೊಂಡರೆ ಹಾವುಗಳು ಏನೂ ಮಾಡುವುದಿಲ್ಲ. ಆದರೂ ಕೆಲವೊಮ್ಮೆ ಮಕ್ಕಳಿಗೆ ಕಚ್ಚಿವೆಯಾದರೂ, ಅದರಿಂದ ಏನೂ ಅಪಾಯವಾಗಿಲ್ಲ ಎನ್ನುತ್ತಾರೆ ಎರಿಕ್ ಲಿಬ್ ಲೈಕ್.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...