alex Certify
ಕನ್ನಡ ದುನಿಯಾ       Mobile App
       

Kannada Duniya

ಹುಡುಗಿ ಧೈರ್ಯಕ್ಕೆ ಸೋಲೊಪ್ಪಿಕೊಂಡ ಕಾಳಿಂಗ ಸರ್ಪ

King-cobra-attacks-girl-2

ಹಾವಿನ ಹೆಸರು ಕೇಳಿದ್ರೆ ಮೈ ಜುಮ್ಮೆನ್ನುತ್ತೆ. ಅಚಾನಕ್ಕಾಗಿ ಹಾವು ಎದುರಿಗೆ ಬಂದ್ರಂತೂ ಕಥೆ ಮುಗಿದೆ ಹೋಯ್ತು. ಕೆಲವರಿಗೆ ಹೃದಯಾಘಾತವಾದ್ರೂ ಆಶ್ಚರ್ಯಪಡಬೇಕಾಗಿಲ್ಲ. ಆದ್ರೆ ಊಹಿಸಿರದ ಜಾಗದಲ್ಲಿ ಹಾವು ದಾಳಿ ನಡೆಸಲು ಮುಂದಾದ್ರೂ ಹೆದರದ ಆ ಹುಡುಗಿ ಹಾವನ್ನೇ ಸೋಲಿಸಿದ್ದಾಳೆ.

ಘಟನೆ ನಡೆದಿರುವುದು ದಕ್ಷಿಣ ಆಫ್ರಿಕಾದಲ್ಲಿ. ಸ್ನೇಹಿತರ ಜೊತೆ ಹುಡುಗಿಯೊಬ್ಬಳು ಪರ್ವತ ಶ್ರೇಣಿಯ ಇಳಿಜಾರಿನಲ್ಲಿ ಸನ್ ಬಾತ್ ಮಾಡ್ತಾ ಕುಳಿತಿದ್ದಳು. ಮಾತಿನಲ್ಲಿ ತಲ್ಲೀನಳಾಗಿದ್ದ ಆಕೆ ಮುಂದೆ ಹೀಗಾಗಬಹುದೆಂದು ನಿರೀಕ್ಷೆ ಕೂಡ ಮಾಡಿರಲಿಲ್ಲ. ಏನಾಗ್ತಾ ಇದೆ ಎಂಬುದು ಗೊತ್ತಾಗುವ ಮೊದಲೇ ಕಾಳಿಂಗ ಸರ್ಪವೊಂದು ನದಿಯ ಬಳಿಯಿಂದ ವೇಗವಾಗಿ ಬಂದು ಹುಡುಗಿ ಮೇಲೆ ದಾಳಿ ನಡೆಸಿತ್ತು.

6 ಅಡಿ ಉದ್ದದ ಹಾವು ಬಂದ ವೇಗಕ್ಕೆ ಅಲ್ಲಿಂದ ಹುಡುಗಿಗೆ ಓಡುವುದಿರಲಿ ಏಳಲೂ ಸಾಧ್ಯವಾಗಲಿಲ್ಲ. ಹುಡುಗಿ ಮೇಲೆ ಹಾವು ದಾಳಿ ಮಾಡ್ತಾ ಇದ್ದರೂ ಧೈರ್ಯ ಗೆಡದ ಹುಡುಗಿ ಹಾವಿಗಿಂತ ವೇಗವಾಗಿ ಪ್ರತಿ ದಾಳಿ ನಡೆಸಿದ್ದಾಳೆ. ಸರ್ಪವನ್ನು ಕೈನಲ್ಲಿ  ಗಟ್ಟಿಯಾಗಿ ಹಿಡಿದುಕೊಂಡು ಬಹು ದೂರ ಎಸೆದಿದ್ದಾಳೆ. ಆಕೆಯ ಹಿಂಬದಿಗೆ ಕುಳಿತಿದ್ದ ಸ್ನೇಹಿತರು ಈ ದೃಶ್ಯವನ್ನು ಸಂಪೂರ್ಣವಾಗಿ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಇದನ್ನು ನೋಡಿದ ಜನರು ಹುಡುಗಿ ಧೈರ್ಯವನ್ನು ಕೊಂಡಾಡುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...