alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಗಬಾರದ ಜಾಗದಲ್ಲಿ ಸಿಕ್ಕಿಕೊಂಡು ವಿಲವಿಲ ಒದ್ದಾಡಿಬಿಡ್ತು ಹಾವು

ಹಾವು ಅಂದ್ರೆನೇ ಜನ ಭಯ ಬೀಳ್ತಾರೆ. ಅಲ್ಲದೆ ಈ ವಿಷಕಾರಿ ಜೀವಿಯಿಂದ ಬಚಾವ್ ಆದ್ರೆ ಸಾಕಪ್ಪ ಎಂದು ಬೇಡಿಕೊಳ್ಳುತ್ತಾರೆ. ಆದ್ರೆ, ಈ ಜೀವಿ ಸಿಗಬಾರದ ಜಾಗದಲ್ಲಿ ಸಿಕ್ಕು ಒದ್ದಾಡುತ್ತಿದ್ದಾಗ, ಅದನ್ನು ನೋಡಲಾಗದೇ ಅದರ ಸಹಾಯಕ್ಕೆ ಮುಂದಾಗಿದ್ದಾರೆ.

ಹೌದು….ಅಮೆರಿಕಾದ ಅರಿಝೋನಾ ಪ್ರಾಂತ್ಯದಲ್ಲಿ ಇಂತಹದ್ದೇ ಘಟನೆ ನಡೆದಿದೆ. ಹಾವು ಸ್ಪ್ರಿಂಕಲರ್ ಕವರ್ ನಲ್ಲಿ ಸಿಕ್ಕು ಹಾಕಿಕೊಂಡು ಪ್ರಾಣ ಉಳಿಸಿಕೊಳ್ಳಲು ಒದ್ದಾಟ ನಡೆಸಿತ್ತು. ಇದನ್ನು ಕಂಡ ಸ್ಥಳೀಯರು ಹಾವಿನ ಜೀವ ಉಳಿಸಲು ಮುಂದಾಗಿದ್ದಾರೆ.

ಅದ್ರಂತೆ ಮೊದಲು ಹಾವು ಸಿಕ್ಕು ಹಾಕಿಕೊಂಡ ಸ್ಥಳಕ್ಕೆ ಎಣ್ಣೆ ಬಿಟ್ಟು ನೋಡಿದ್ದಾರೆ. ಈ ಪ್ಲಾನ್ ವರ್ಕ್ ಔಟ್ ಆಗದೇ ಇದ್ದಾಗ, ಹಾವಿನ ಚರ್ಮಕ್ಕೆ ಹಾನಿಯಾಗದ ರೀತಿ ತೆಗೆಯಲು ತಂತ್ರ ರೂಪಿಸಿದ್ದಾರೆ. ಅದ್ರಂತೆ ಸುಮಾರು 20 ನಿಮಿಷದ ಬಳಿಕ ಹಾವು ಸುರಕ್ಷಿತವಾಗಿ ಪಾರಾಗಿದೆ. ಹಾವನ್ನು ರಕ್ಷಿಸಿದ ತಂಡ ಸಮಾಧಾನದ ನಿಟ್ಟುಸಿರುಬಿಟ್ಟಿದೆ.

ಹಾವನ್ನು ಸಂರಕ್ಷಿಸಿದ ಕಥೆಯನ್ನು ಫೇಸ್ ಬುಕ್ ನಲ್ಲಿ ಹಾಕಲಾಗಿದ್ದು ಇದಕ್ಕೆ ಭಾರೀ ಕಮೆಂಟ್ ಗಳು ಸಿಕ್ಕಿವೆ. ಸಾರ್ವಜನಿಕರು ಹಾವಿನ ಜೀವ ಉಳಿಸಿದ ತಂಡಕ್ಕೆ ಅಭಿನಂದನೆ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...