alex Certify
ಕನ್ನಡ ದುನಿಯಾ       Mobile App
       

Kannada Duniya

ಒಡೆಯನ ಪ್ರಾಣ ತೆಗೀತು ಮುದ್ದಾಗಿ ಸಾಕಿದ್ದ ಹೆಬ್ಬಾವು

ಹ್ಯಾಂಪ್ ಶೈರ್ ನಲ್ಲಿ ಹೆಬ್ಬಾವು ತನ್ನ ಒಡೆಯನನ್ನೇ ಕೊಂದು ಹಾಕಿದೆ. ಚರ್ಚ್ ಕ್ರೂಕ್ಹಮ್ ನಿವಾಸಿ ಡಾನ್ ಬ್ರಾಂಡನ್ ಎಂಬಾತ ಹೆಬ್ಬಾವೊಂದನ್ನು ಸಾಕಿದ್ದ. 8 ವರ್ಷಗಳಿಂದ ತನ್ನ ಸ್ವಂತ ಮಗುವಿನಂತೆ ಅದರ ಆರೈಕೆ ಮಾಡುತ್ತಿದ್ದ, ಪ್ರೀತಿಯಿಂದ ನೋಡಿಕೊಂಡಿದ್ದ.

ಡಾನ್ 10 ಹಾವುಗಳು ಮತ್ತು 12 ಜೇಡಗಳನ್ನು ಸಾಕಿದ್ದನಂತೆ. ಅವುಗಳಲ್ಲಿ ಟಿನಿ ಎಂಬ ಹಳದಿ ಬಣ್ಣದ ಹೆಬ್ಬಾವು ಅವನ ಫೇವರಿಟ್ ಆಗಿತ್ತು. ಅದನ್ನು ಕುತ್ತಿಗೆಗೆ ಸುತ್ತಿಕೊಂಡು ಮುದ್ದಿಸುತ್ತಿದ್ದ. ಆದ್ರೆ ಹಾವುಗಳು ತುಂಬಾ ಅಪಾಯಕಾರಿ, ಯಾವಾಗ ಬೇಕಾದ್ರೂ ತಿರುಗಿ ಬೀಳಬಹುದು ಅಂತಾ ಮನೆಯವರು ಎಚ್ಚರಿಸಿದ್ರು.

ಆಗಿನಿಂದ ಹೆಬ್ಬಾವನ್ನು ಕುತ್ತಿಗೆಗೆ ಸುತ್ತಿಕೊಳ್ಳೋ ಅಭ್ಯಾಸ ಬಿಟ್ಟಿದ್ದ. ಇದ್ದಕ್ಕಿದ್ದಂತೆ ಒಂದು ದಿನ ಡಾನ್ ಮನೆಯಲ್ಲೇ ಶವವಾಗಿ ಹೋಗಿದ್ದಾನೆ. ಆತನ ಸಾವಿಗೆ ಹೆಬ್ಬಾವೇ ಕಾರಣ ಅಂತಾ ಮನೆಯವರು ಕೋರ್ಟ್ ಗೆ ತಿಳಿಸಿದ್ದಾರೆ. ಆದ್ರೆ ಆತನ ಸಾವು ಯಾವ ರೀತಿ ಸಂಭವಿಸಿದೆ ಅನ್ನೋದು ಇದುವರೆಗೂ ಸ್ಪಷ್ಟವಾಗಿಲ್ಲ. ಹೆಬ್ಬಾವು ಕುತ್ತಿಗೆಗೆ ಸುತ್ತಿಕೊಂಡು, ಉಸಿರುಗಟ್ಟಿ ಸತ್ತಿರಬಹುದು ಅಂತಾ ಹೇಳಲಾಗ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...