alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆಯಲ್ಲಿ ಹರಿದಿತ್ತು ಮದ್ಯದ ಹೊಳೆ

ಜರ್ಮನಿಯ ಹೈವೇಯಲ್ಲಿ ಬಿಯರ್ ಬಾಟಲಿಗಳನ್ನು ಹೊತ್ತು ತರ್ತಾ ಇದ್ದ ವಾಹನವೊಂದು ಅಪಘಾತಕ್ಕೀಡಾಗಿದೆ. ಫ್ರಾಂಕ್ಫರ್ಟ್ ಹೆದ್ದಾರಿಯಲ್ಲಿ ಬಿಯರ್ ಬಾಟಲಿ ತುಂಬಿಕೊಂಡು ಬರ್ತಾ ಇದ್ದ ಲಾರಿಗೆ ಕಾರ್ ಡಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ಲಾರಿ ಕೂಡ ಪಲ್ಟಿಯಾಗಿದ್ದು, ಒಳಗಿದ್ದ 30,000 ಬಿಯರ್ ಬಾಟಲಿಗಳು ರಸ್ತೆ ಪಾಲಾಗಿವೆ. ಎಲ್ಲಾ ಕಡೆ ಬಾಟಲಿಗಳು ಒಡೆದು ರಾಶಿಯಾಗಿ ಬಿದ್ದಿದ್ವು. ರಸ್ತೆಯಲ್ಲಿ ಮದ್ಯದ ಹೊಳೆಯೇ ಹರಿದಿತ್ತು.

1500ಕ್ಕೂ ಹೆಚ್ಚು ಬಿಯರ್ ಬಾಟಲಿಗಳು ಸಂಪೂರ್ಣ ಚೂರುಚೂರಾಗಿ ಹೋಗಿವೆ. ಅಪಘಾತದಲ್ಲಿ ಲಾರಿ ಚಾಲಕ ಕೂಡ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತದ ಬಳಿಕ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಕೆಲಕಾಲ ವಾಹನ ಸಂಚಾರವನ್ನೇ ಬಂದ್ ಮಾಡಿ ಸ್ವಚ್ಛತಾ ಕಾರ್ಯ ನಡೆಸಲಾಯ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...