alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ, ಅಮೆರಿಕಾ ಅಧ್ಯಕ್ಷರು ಬಳಸುವ ವಸ್ತುವಿನಿಂದ ಪುಟಿನ್ ದೂರ ದೂರ….!

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಹಾಗೂ ಸ್ಮಾರ್ಟ್ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಆದ್ರೆ ವಿಶ್ವದ ಅತ್ಯಂತ ಜನಪ್ರಿಯ ಹಾಗೂ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇನ್ನೂ ಸ್ಮಾರ್ಟ್ಫೋನ್ ಕೈನಲ್ಲಿ ಹಿಡಿದಿಲ್ಲವಂತೆ.

ಯಸ್, ಈ ವಿಷ್ಯವನ್ನು ವಿಜ್ಞಾನಿಗಳು ಹಾಗೂ ಶಿಕ್ಷಣ ತಜ್ಞರ ಸಭೆಯಲ್ಲಿ ಪಾಲ್ಗೊಂಡಿದ್ದ ಪುಟಿನ್ ಹೇಳಿದ್ದಾರೆ. ನಾನು ಸ್ಮಾರ್ಟ್ಫೋನ್ ಬಳಸುತ್ತಿಲ್ಲ ಎಂದಿರುವ ಪುಟಿನ್ ಸಾಮಾಜಿಕ ಜಾಲತಾಣದ ಬಗ್ಗೆಯೂ ನನಗೆ ಆಸಕ್ತಿಯಿಲ್ಲ ಎಂದಿದ್ದಾರೆ. ಇದೇ ಕಾರಣಕ್ಕೆ ನಾನು ಸಾಮಾಜಿಕ ಜಾಲತಾಣದಲ್ಲಿ ಅಕೌಂಟ್ ತೆರೆದಿಲ್ಲವೆಂದು ಅವರು ಹೇಳಿದ್ದಾರೆ.

ವಿಶ್ವದ ಜನಪ್ರಿಯ ವ್ಯಕ್ತಿ ಪುಟಿನ್ ಕೈನಲ್ಲಿ ಸ್ಮಾರ್ಟ್ಫೋನ್ ಇಲ್ಲ ನಿಜ. ಆದ್ರೆ ನರೇಂದ್ರ ಮೋದಿಯವರಿಂದ ಹಿಡಿದು ಬೇರೆ ದೇಶಗಳ ಅಧ್ಯಕ್ಷರ ಕೈನಲ್ಲಿ ನಾವು ಬೆಲೆ ಬಾಳುವ ಸ್ಮಾರ್ಟ್ಫೋನ್ ನೋಡಬಹುದಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಐಪೋನ್ 6 ಸ್ಮಾರ್ಟ್ಫೋನ್ ಜೊತೆ ಕಾಣಿಸಿಕೊಂಡಿದ್ದಾರೆ.

ಅಮೆರಿಕಾ ಅಧ್ಯಕ್ಷರು ತಮ್ಮ ಅಧಿಕಾರಾವಧಿಯಲ್ಲಿ ಬ್ಲ್ಯಾಕ್ಬೆರಿ ಸ್ಮಾರ್ಟ್ಫೋನ್ ಬಳಸ್ತಾರೆ. ಉತ್ತರ ಕೊರಿಯಾ ಅಧ್ಯಕ್ಷ ಕಿಂಮ್ ಜೊಂಗ್ HTC ಬಟರ್ಫ್ಲೈ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಚೀನಾ ಅಧ್ಯಕ್ಷರು Xi Jinping ಸ್ಮಾರ್ಟ್ಫೋನ್ ಬಳಸ್ತಾರೆ. ಚೀನಾದ ಪ್ರಥಮ ಮಹಿಳೆ ಪಿಂಗ್ ಲಿ ಯುವಾನ್ ಐಫೋನ್ 5 ಸ್ಮಾರ್ಟ್ಫೋನ್ ಹೊಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...