alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! ಮೊಬೈಲ್ ಬ್ಲಾಸ್ಟ್ ಆಗಿ ಬಾಲಕನ ಕಣ್ಣೇ ಹೋಯ್ತು

ಮೊಬೈಲ್ ಬ್ಲಾಸ್ಟ್ ಆಗಿ 12 ವರ್ಷದ ಬಾಲಕನೊಬ್ಬ ಕಣ್ಣು ಮತ್ತು ಕೈಬೆರಳನ್ನೇ ಕಳೆದುಕೊಂಡಿದ್ದಾನೆ. ಚೀನಾದಲ್ಲಿ ಈ ದುರಂತ ನಡೆದಿದೆ. ಬಾಲಕ ಮೊಬೈಲ್ ಚಾರ್ಜಿಂಗ್ ಗೆ ಹಾಕಿ ಅದನ್ನು ಆಪರೇಟ್ ಮಾಡುತ್ತಿದ್ದ. ಈ ವೇಳೆ ದಿಢೀರನೆ ಅದು ಸ್ಫೋಟಿಸಿದೆ.

ಆತನ ಬಲಗೈ ತೋರು ಬೆರಳು ಸಂಪೂರ್ಣ ತುಂಡಾಗಿ ಹೋಗಿದೆ. ಬಲಗಣ್ಣಿಗೂ ತೀವ್ರ ಗಾಯವಾಗಿದ್ದು, ದೃಷ್ಟಿಯನ್ನೇ ಕಳೆದುಕೊಂಡಿದ್ದಾನೆ. ಸ್ಫೋಟದ ರಭಸಕ್ಕೆ ಆತ ಪ್ರಜ್ಞೆತಪ್ಪಿ ಬಿದ್ದಿದ್ದ. ಅವನ ಸಹೋದರಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಳು.

ಆತನ ಮುಖ, ಎದೆ ಮತ್ತು ಕಣ್ಣಿನಲ್ಲಿ ಪ್ಲಾಸ್ಟಿಕ್ ನ ತುಣುಕುಗಳು ಸೇರಿಕೊಂಡಿದ್ದವು, ಅದನ್ನೆಲ್ಲ ಶಸ್ತ್ರಚಿಕಿತ್ಸೆಯ ಮೂಲಕ ವೈದ್ಯರು ಹೊರತೆಗೆದಿದ್ದಾರೆ. ಒಂದು ಕಣ್ಣು ಬಾಗಶಃ ಕುರುಡಾಗಿದ್ದು, ಬೆರಳನ್ನು ಮರುಜೋಡಿಸಲು ಸಾಧ್ಯವಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...