alex Certify
ಕನ್ನಡ ದುನಿಯಾ       Mobile App
       

Kannada Duniya

ಚೀನಾದ ರಾಷ್ಟ್ರಗೀತೆ ಹಾಡಲು ಒಂದೇ ಸ್ಪೀಡ್….

Pupils who have joined the Young Pioneers sing the Chinese national anthem during a ceremony as they celebrate the upcoming 61st anniversary of the Young Pioneers of China in Taiyuan, Shanxi province October 12, 2010. The Young Pioneers of China is a youth organization which was founded on October 13, 1949. REUTERS/Stringer (CHINA - Tags: ANNIVERSARY EDUCATION) CHINA OUT. NO COMMERCIAL OR EDITORIAL SALES IN CHINA - RTXTC6W

ಚೀನಾದ ರಾಷ್ಟ್ರಗೀತೆಯ ಮೇಲೆ ಇನ್ನೊಂದಷ್ಟು ನಿರ್ಬಂಧಗಳನ್ನು ಹೇರಲಾಗಿದೆ. ಮದುವೆ ಸಮಾರಂಭ ಹಾಗೂ ಅಂತ್ಯಸಂಸ್ಕಾರದಲ್ಲಿ ರಾಷ್ಟ್ರಗೀತೆಯನ್ನು ಹಾಡದಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಇದೀಗ ಯಾವ ವೇಗದಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂಬ ಬಗ್ಗೆ ಹೊಸ ನಿಯಮ ಜಾರಿ ಮಾಡಲಾಗ್ತಿದೆ.

ರಾಷ್ಟ್ರಗೀತೆಯನ್ನು ಜನರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಅನ್ನೋ ಆರೋಪವಿದೆ. ರಾಷ್ಟ್ರಗೀತೆ ಹಾಡುವ ವೇಳೆ ಕೆಲವರು ನಗ್ತಾ ಇದ್ರೆ, ಇನ್ನು ಕೆಲವರು ಗದ್ದಲ ಮಾಡ್ತಾರೆ. ಹಾಗಾಗಿ ಅದನ್ನು ಅಸಮರ್ಪಕ ರೀತಿಯಲ್ಲಿ ಹಾಡಲಾಗ್ತಿದೆ. ಅದನ್ನು ತಪ್ಪಿಸಲೆಂದೇ ರಾಷ್ಟ್ರಗೀತೆಯನ್ನು ಯಾವ ರೀತಿ, ಯಾವ ವೇಗದಲ್ಲಿ ಹಾಡಬೇಕು ಎಂಬ ಬಗ್ಗೆ ನಿಯಮ ಜಾರಿಗೆ ತರಲು ಯೋಜಿಸಲಾಗಿದೆ.

ಪ್ರಮುಖ ಕ್ರೀಡಾ ಕಾರ್ಯಕ್ರಮಗಳು ಮತ್ತು ಔಪಚಾರಿಕ ರಾಜತಾಂತ್ರಿಕ ಸಂದರ್ಭಗಳಲ್ಲಿ ಮಾತ್ರ ರಾಷ್ಟ್ರಗೀತೆಯನ್ನು ಪ್ರಸಾರ ಮಾಡಬಹುದು, ಇದನ್ನು ಖಾಸಗಿ ಮನರಂಜನೆಗಾಗಿ ಬಳಸಿಕೊಳ್ಳುವಂತಿಲ್ಲ ಅನ್ನೋ ಕಾನೂನನ್ನು 2014 ರಲ್ಲೇ ಚೀನಾ ಜಾರಿಗೆ ತಂದಿದೆ. ಮುಂದಿನ ತಿಂಗಳು ಹೊಸ ನಿಯಮ ಕೂಡ ಅಸ್ತಿತ್ವಕ್ಕೆ ಬರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...