alex Certify
ಕನ್ನಡ ದುನಿಯಾ       Mobile App
       

Kannada Duniya

ನಿದ್ದೆ ಮಂಪರಿನಲ್ಲಿದ್ದ ಪುಟ್ಟ ಬಾಲಕ ಮಾಡಿದ್ದೇನು ಗೊತ್ತಾ…?

ಶಾಲೆಯಲ್ಲಿ ನಿದ್ದೆ ಮಂಪರಿನಲ್ಲಿದ್ದ ಬಾಲಕನೊಬ್ಬ ಮನೆಗೆ ಹೊರಡುವಾಗ ತನ್ನ ಪಾಠಿ ಚೀಲದ ಬದಲು ಖುರ್ಚಿ ಎತ್ತಿಕೊಂಡು ಹೊರಟ ಹಾಸ್ಯ ಪ್ರಸಂಗವೊಂದು ಈಗ ವಿಶ್ವದಾದ್ಯಂತ ಸದ್ದು ಮಾಡಿದೆ.

ಫಿಲಿಫೈನ್ಸ್ ನಲ್ಲಿ ಈ ಘಟನೆ ನಡೆದಿದ್ದು, ಶಾಲೆ ಸಮಯ ಮುಗಿಯುತ್ತಿದ್ದಂತೆ ಶಿಕ್ಷಕರು 4 ವರ್ಷದ ಬಾಲಕನನ್ನು ಎಬ್ಬಿಸುತ್ತಾರೆ. ನಿದ್ದೆಯ ಮಂಪರಲ್ಲಿದ್ದ ಆತ ದಿಡೀರನೆ ಎದ್ದು ಕೈಗೆ ಸಿಕ್ಕಿದ ಖುರ್ಚಿಯನ್ನು ಬಗಲಿಗೆ ಹಾಕಿಕೊಂಡು ಕೊಠಡಿಯಿಂದ ಹೊರಟುಬಿಟ್ಟ. ಈ ಸಂದರ್ಭದಲ್ಲಿ ಶಿಕ್ಷಕರಿಗೂ ನಗೆ ತಡೆಯಲು ಸಾಧ್ಯವಾಗಲಿಲ್ಲ.

ಇಡೀ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆ ಬಾಲಕನ ಅಜ್ಜಿ ಸಾಮಾಜಿಕ ಜಾಲತಾಣದಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೇ, ನೀನು ಶಾಲೆಗೆ ಹೋಗುವುದು ನಿದ್ರಿಸಲು ಎಂದು ಹಾಸ್ಯ ಶೀರ್ಷಿಕೆ ಕೂಡ ನೀಡಿದ್ದಾರೆ. ಈ ವಿಡಿಯೋ ಈಗ ವಿಶ್ವದಾದ್ಯಂತ ವೈರಲ್ ಆಗಿದೆ.

ANg dami mo napatawa na bata ka😂😂😂Pumasok ng skul para lang matulog😂😂,At ginawa mo pang bag yung upuan😂😂😂😂😂

Posted by Agnes Ravelo Orillos on Wednesday, August 29, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...