alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗಳಲ್ಲಿ ಸ್ಕರ್ಟ್ ಬ್ಯಾನ್ : ವಿದ್ಯಾರ್ಥಿನಿಯರು ಧರಿಸಬೇಕು ಫುಲ್ ಪ್ಯಾಂಟ್

ಭಾರತದ ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿನಿಯರು ಸಮವಸ್ತ್ರದ ರೂಪದಲ್ಲಿ ಸ್ಕರ್ಟ್ ಧರಿಸುತ್ತಾರೆ. ಸ್ಕರ್ಟ್ ಬ್ಯಾನ್ ಮಾಡಿದ್ರೆ ಸಾಮಾಜದಲ್ಲಿ ಪ್ರತಿಭಟನೆ ಕೇಳಿ ಬರೋದು ಸಾಮಾನ್ಯ. ಈ ಬಾರಿ ಭಾರತವಲ್ಲ ಬ್ರಿಟನ್ ಶಾಲೆ ಸಮವಸ್ತ್ರ ಪಟ್ಟಿಯಿಂದ ಸ್ಕರ್ಟ್ ತೆಗೆದು ಹಾಕುವ ನಿರ್ಧಾರಕ್ಕೆ ಬಂದಿದೆ.

ಬ್ರಿಟನ್ ನಲ್ಲಿ ಲಿಂಗ ತಾರತಮ್ಯಕ್ಕೆ ವಿರೋಧ ವ್ಯಕ್ತವಾಗ್ತಿದೆ. ಏಕರೂಪ ಕಾಯ್ದೆಗೆ ಒತ್ತಡ ಕೇಳಿ ಬರ್ತಿದೆ. ಇದೇ ಕಾರಣಕ್ಕೆ ಬ್ರಿಟನ್ ಶಾಲಾ ವಿದ್ಯಾರ್ಥಿನಿಯರಿಗೆ ಸ್ಕರ್ಟ್ ಬ್ಯಾನ್ ಮಾಡಲು ನಿರ್ಧರಿಸಲಾಗಿದೆ. ಶೀಘ್ರವೇ ಈ ಹೊಸ ನಿಯಮ ಜಾರಿಗೆ ಬರಲಿದೆ. ಈಗಾಗಲೇ ಸುಮಾರು 40 ಮಾಧ್ಯಮಿಕ ಶಾಲೆಗಳಲ್ಲಿ ಸ್ಕರ್ಟ್ ಬ್ಯಾನ್ ಮಾಡಲಾಗಿದೆ. ಉಳಿದ ಶಾಲೆ ಆಡಳಿತ ಮಂಡಳಿ ಕೂಡ ಇದ್ರ ಬಗ್ಗೆ ಆಲೋಚನೆ ಮಾಡ್ತಿದೆ.

ದೇಶದಲ್ಲಿ ಲಿಂಗ ಗುರುತಿಸುವಿಕೆ ಕಾಯ್ದೆಯಲ್ಲಿ ತಿದ್ದುಪಡಿ ತರಲಾಗ್ತಿದೆ. ಟ್ರಾನ್ಸ್ಜಂಡರ್ ಜನರ ಹಕ್ಕನ್ನು ಸ್ಪಷ್ಟಪಡಿಸುವ ನಿರ್ಧಾರಕ್ಕೆ ಬರಲಾಗ್ತಿದೆ. ಸರ್ಕಾರದ ಈ ನೀತಿಗಳನ್ನು ಗಮನದಲ್ಲಿಟ್ಟುಕೊಂಡಿರುವ ಶಾಲೆಗಳು ಸ್ಕರ್ಟ್ ಬ್ಯಾನ್ ಗೆ ನಿರ್ಧರಿಸಿವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...