alex Certify
ಕನ್ನಡ ದುನಿಯಾ       Mobile App
       

Kannada Duniya

ಏಕ ಪೋಷಕ ಕುಟುಂಬದಲ್ಲಿ ಬೆಳೆಯುವ ಮಕ್ಕಳು ಎದುರಿಸುತ್ತಾರೆ ಈ ಸಮಸ್ಯೆ

istock_000064590641_large-690x460

ಮಗುವಿಗೆ ತಂದೆ ತಾಯಿ ಇಬ್ಬರ ಪ್ರೀತಿಯೂ ಬೇಕು. ಯಾಕಂದ್ರೆ ಏಕ ಪೋಷಕರ ಕುಟುಂಬದಲ್ಲಿ ಬೆಳೆದ ಮಕ್ಕಳು ಪ್ರೌಢಾವಸ್ಥೆಗೆ ಬಂದ ಮೇಲೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಬದುಕಿನ ಬಗ್ಗೆ ಅವರಲ್ಲಿ ತೃಪ್ತ ಭಾವನೆ ಇರುವುದಿಲ್ಲ ಅನ್ನೋದು ಇತ್ತೀಚೆಗೆ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ.

ಏಕ ಪೋಷಕರ ಜೊತೆಗೆ ಬೆಳೆದ ಮಕ್ಕಳು, ದೊಡ್ಡವರಾದ್ಮೇಲೆ ಉಳಿದವರಿಗಿಂತ ಶೇ.30ರಷ್ಟು ಕಡಿಮೆ ಸಂಪಾದಿಸುತ್ತಾರಂತೆ, ಜೊತೆಗೆ ನಿರುದ್ಯೋಗಿಯಾಗಿ ಉಳಿಯುವ ಸಾಧ್ಯತೆಗಳೂ ಹೆಚ್ಚಾಗಿರುತ್ತವೆ. ಉಳಿದವರಿಗೆ ಹೋಲಿಸಿದಲ್ಲಿ ಅವರಲ್ಲಿ ರೊಮ್ಯಾಂಟಿಕ್ ಭಾವನೆಗಳು ಕೂಡ ಶೇ,9ರಷ್ಟು ಕಡಿಮೆಯಾಗಿರುತ್ತವೆ.

ಲಂಡನ್ ನ ಯುನಿವರ್ಸಿಟಿ ಆಫ್ ವಾರ್ವಿಕ್ ನಲ್ಲಿ ಈ ಬಗ್ಗೆ ಸಂಶೋಧನೆ ನಡೆದಿದೆ. ಏಕ ಪೋಷಕರ ಜೊತೆಗೆ ಬಾಲ್ಯ ಕಳೆದ 24,000 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಬಾಲ್ಯದ ಪರಿಸ್ಥಿತಿ ಅವರ ಮೇಲೆ ಯಾವ ರೀತಿ ಪರಿಣಾಮ ಬೀರಿದೆ ಅನ್ನೋದನ್ನು ವಿಜ್ಞಾನಿಗಳು ಸಂಶೋಧಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...