alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ನವದಂಪತಿಯ ಆ ಫೋಟೋ

singapora

ಆಧುನಿಕತೆಯಿಂದಾಗಿ ಪ್ರಪಂಚವೇ ಹಳ್ಳಿಯಂತಾಗಿದ್ದು, ಸಾಮಾಜಿಕ ಜಾಲತಾಣಗಳಿಂದ ಸಂಪರ್ಕ ಕ್ರಾಂತಿಯೇ ಉಂಟಾಗಿದೆ. ವಿಶ್ವದಲ್ಲಿ ಅಪಾರ ಸಂಖ್ಯೆಯ ಜನ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಏನಾದರೂ, ಸ್ಪೆಷಲ್ ಫೋಟೋ, ವಿಡಿಯೋ ಅಪ್ ಲೋಡ್ ಆದಲ್ಲಿ ವೈರಲ್ ಆಗಿ ಬಿಡುತ್ತವೆ.

ಸಿಂಗಾಪುರದಲ್ಲಿನ ನವದಂಪತಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮದುವೆಯಲ್ಲಿ ಯುವ ಜೋಡಿ ರಿಂಗ್ ಬದಲಿಸಿಕೊಳ್ಳುವಾಗ ಆಕೆಯ ಮಾಜಿ ಬಾಯ್ ಫ್ರೆಂಡ್ ಭಾರೀ ಬೇಸರದಿಂದ ನಿಂತಿದ್ದಾನೆ. ಅದನ್ನು ಸ್ಪೋರ್ಟಿವ್ ಆಗಿ ತೆಗೆದುಕೊಂಡ ಜೋಡಿ, ಅವನಿಗೆ ಇನ್ನಷ್ಟು ಬೇಸರವಾಗಲೆಂದು ನಗುತ್ತಾ ರಿಂಗ್ ಬದಲಿಸಿಕೊಂಡಿದ್ದಾರೆ. ಆತ ಮಾತ್ರ ಉಕ್ಕಿ ಬರುತ್ತಿದ್ದ ದುಃಖವನ್ನು ತಡೆದುಕೊಂಡು ಇವರಿಬ್ಬರನ್ನು ನೋಡುತ್ತಾ ನಿಂತಿದ್ದನ್ನು ನೋಡಿದರೆ ಅಯ್ಯೋ ಪಾಪ ಅನಿಸುವಂತಿದೆ.

ಸಿಂಗಾಪುರದ ಈ ಜೋಡಿ ಮದುವೆಯಾದ ಸಂದರ್ಭದಲ್ಲಿ ಮಾಜಿ ಗೆಳೆಯ ಬೇಸರದಿಂದ ನಿಂತಿದ್ದನ್ನು ಕಂಡ ಸ್ನೇಹಿತನೊಬ್ಬ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ ಲೋಡ್ ಮಾಡಿದ್ದು, ಅದನ್ನು ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...