alex Certify
ಕನ್ನಡ ದುನಿಯಾ       Mobile App
       

Kannada Duniya

OMG…! ಹಾವಿನ ಜೊತೆ ಸಂಸಾರ ನಡೆಸ್ತಾನೆ ಈ ವ್ಯಕ್ತಿ

ಕನಸಿನಲ್ಲಿ ಹಾವು ಕಂಡ್ರೂ ಕೆಲವರು ಬೆಚ್ಚಿ ಬೀಳ್ತಾರೆ. ಹಾವು ಎದುರಿಗೆ ಬಂದ್ರೆ ಹೆದರಿ ಓಡುವವರೇ ಹೆಚ್ಚು. ಹಾವಿನ ಜೊತೆ ಐದು ನಿಮಿಷ ಇರಲೂ ಸಾಧ್ಯವಿಲ್ಲ. ಇನ್ನು ಹಾವನ್ನು ಮದುವೆಯಾಗುವುದು ಅಸಾಧ್ಯವಾದ ಮಾತು. ಆದ್ರೆ ಇಲ್ಲೊಬ್ಬ ಆಸಾಮಿ ಅಸಾಧ್ಯವನ್ನು ಸಾಧ್ಯ ಮಾಡಿದ್ದಾನೆ.

ಸಿಂಗಾಪುರದ ವ್ಯಕ್ತಿಯೊಬ್ಬ ಹಾವಿನ ಜೊತೆ ಸಂಸಾರ ನಡೆಸುತ್ತಿದ್ದಾನೆ. ಇದು ಚಿಕ್ಕಪುಟ್ಟ ಹಾವಲ್ಲ. ಬರೋಬ್ಬರಿ 10 ಅಡಿ ಉದ್ದವಿದೆ. ಹಾವನ್ನು ಮದುವೆಯಾಗಿರುವ ವ್ಯಕ್ತಿ ಒಂದು ಕ್ಷಣವೂ ಹಾವನ್ನು ಬಿಟ್ಟು ಇರೋದಿಲ್ಲ. ಊಟ, ಜಿಮ್, ಟಿವಿ, ಸುತ್ತಾಟ ಎಲ್ಲವೂ ಹಾವಿನ ಜೊತೆಯೇ ಆಗುತ್ತದೆ. ಹಾವಿನ ಜೊತೆಯೇ ಈತ ರಾತ್ರಿ ಕಳೆಯುತ್ತಾನೆ.

ವಾಸ್ತವವಾಗಿ ಹಾವನ್ನು ಮದುವೆಯಾಗಿರುವ ವ್ಯಕ್ತಿ 5 ವರ್ಷಗಳ ಹಿಂದೆ ತನ್ನ ಗರ್ಲ್ ಫ್ರೆಂಡ್ ಕಳೆದುಕೊಂಡಿದ್ದನಂತೆ. ಅತಿಯಾಗಿ ಪ್ರೀತಿ ಮಾಡ್ತಿದ್ದ ಪ್ರೇಯಸಿ ಸಾವನ್ನಪ್ಪಿದ್ದಳಂತೆ. ಅದಾದ ಕೆಲವೇ ದಿನಗಳಲ್ಲಿ ಈತನ ಜೀವನಕ್ಕೆ ಹಾವು ಎಂಟ್ರಿಯಾಯ್ತಂತೆ. ಹಾವನ್ನೇ ಸತ್ತು ಹೋಗಿರುವ ತನ್ನ ಪ್ರೇಯಸಿ ಎಂದುಕೊಂಡಿರುವ ವ್ಯಕ್ತಿ ಹಾವನ್ನು ಮದುವೆಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...