alex Certify
ಕನ್ನಡ ದುನಿಯಾ       Mobile App
       

Kannada Duniya

ನಾಗರಿಕರಿಗೆ 15 ಸಾವಿರ ರೂ. ಬೋನಸ್ ನೀಡಲಿದೆ ಸಿಂಗಾಪುರ ಸರ್ಕಾರ

ಸಿಂಗಾಪುರ ಜನರಿಗೆ ಅಲ್ಲಿನ ಸರ್ಕಾರ ಖುಷಿ ಸುದ್ದಿಯೊಂದನ್ನು ನೀಡಿದೆ. 20 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರಿಗೆ 300 ಡಾಲರ್ ಅಂದ್ರೆ ಸುಮಾರು 15 ಸಾವಿರ ರೂಪಾಯಿ ಬೋನಸ್ ನೀಡಲಿದೆ. 2017 ರ ಬಜೆಟ್ ನಲ್ಲಿ ಸಿಕ್ಕ ಹೆಚ್ಚುವರಿ ಹಣವನ್ನು ಬೋನಸ್ ರೂಪದಲ್ಲಿ ನೀಡಲು ಸರ್ಕಾರ ಮುಂದಾಗಿದೆ.

ಸಿಂಗಾಪುರದ ಹಣಕಾಸು ಸಚಿವ ಹೇಗ್ ಸುಯಿ ಕಿಟ್ ಸಂಸತ್ ನಲ್ಲಿ ಮಾಡಿದ ಬಜೆಟ್ ಭಾಷಣದಲ್ಲಿ ಈ ವಿಷ್ಯವನ್ನು ಹೇಳಿದ್ದಾರೆ. ಈ ಹಣವನ್ನು ಸಚಿವರು ಹಾಂಗ್ಬಾವೊ ಎಂದು ವರ್ಣನೆ ಮಾಡಿದ್ದಾರೆ. ವಿಶೇಷ ಸಂದರ್ಭಗಳಲ್ಲಿ ಸಿಂಗಾಪುರದಲ್ಲಿ ನೀಡುವ ಆರ್ಥಿಕ ಉಡುಗೊರೆಯನ್ನು ಹಾಂಗ್ಬಾವೊ ಎಂದು ಕರೆಯಲಾಗುತ್ತದೆ.

ಸಿಂಗಾಪುರ ಸರ್ಕಾರ ಸಿಂಗಾಪುರ ಜನರ ಆದಾಯಕ್ಕೆ ಅನುಸಾರವಾಗಿ ಬೋನಸ್ ನೀಡಲಿದೆ. 2018ರ ಅಂತ್ಯದೊಳಗೆ ಎಲ್ಲ ನಾಗರಿಕರಿಗೂ ಬೋನಸ್ ಸಿಗಲಿದೆ. 28,000 ಸಿಂಗಾಪುರ್ ಡಾಲರ್ ಅಥವಾ ಅದಕ್ಕಿಂತ ಕಡಿಮೆ ಆದಾಯವಿರುವ ನಾಗರಿಕರಿಗೆ ಸರ್ಕಾರ 300 ಸಿಂಗಾಪುರ ಡಾಲರ್ ಹಾಗೂ 28,001 ರಿಂದ 100,000 ಸಿಂಗಾಪುರ್ ಡಾಲರ್ ಆದಾಯ ಗಳಿಸುವ ನಾಗರಿಕರಿಗೆ 200 ಸಿಂಗಾಪುರ ಡಾಲರ್ ಬೋನಸ್ ಸಿಗಲಿದೆ. 100,000 ಸಿಂಗಾಪುರ ಡಾಲರ್ ಗಿಂತ ಹೆಚ್ಚು ಆದಾಯವಿರುವವರಿಗೆ 100 ಸಿಂಗಾಪುರ ಡಾಲರ್ ಬೋನಸ್ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...