alex Certify
ಕನ್ನಡ ದುನಿಯಾ       Mobile App
       

Kannada Duniya

ರುಚಿಗಾಗಿ ಬಿಯರ್ ಗ್ಲಾಸ್ ನಲ್ಲಿ ಹಾಕಿದ್ದ ಮನುಷ್ಯನ ಬೆರಳು ಏನಾಯ್ತು ಗೊತ್ತಾ?

sourtoe-cocktail-in-dawson-city

ಕೆನಡಾದ ಡಾಸನ್ ಸಿಟಿ ಬಾರ್ ನಲ್ಲಿ ಗ್ರಾಹಕರಿಗೆ ಸ್ಪೆಷಲ್ ಕಾಕ್ಟೇಲ್ ಸರ್ವ್ ಮಾಡಲಾಗುತ್ತೆ. ಮದ್ಯದ ಗ್ಲಾಸ್ ನಲ್ಲಿ ಕತ್ತರಿಸಿದ ಮನುಷ್ಯರ ಬೆರಳನ್ನು ಹಾಕಿ ಕೊಡಲಾಗುತ್ತದೆ. ಕಳೆದ ಭಾನುವಾರ ಇದೇ ಬಾರ್ ನಲ್ಲಿ ಮದ್ಯ ಸೇವಿಸಿದ್ದ ವ್ಯಕ್ತಿಯೊಬ್ಬ ಆ ಬೆರಳನ್ನು ಜೇಬಿಗಿಳಿಸಿದ್ದ.

ಬಾರ್ ನಲ್ಲಿ ಇಂತಹ ಹತ್ತಾರು ಬೆರಳುಗಳಿದ್ವು. ಆದ್ರೆ ಇತ್ತೀಚೆಗಷ್ಟೆ ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಿದ್ದ ಆ ಬೆರಳನ್ನು ವ್ಯಕ್ತಿಯೊಬ್ಬ ದಾನವಾಗಿ ಕೊಟ್ಟಿದ್ದ. ಹಾಗಾಗಿ ಅದು ಸಖತ್ ಸ್ಪೆಷಲ್ ಆಗಿತ್ತು. ಬೆರಳು ಕದ್ದೊಯ್ದಿದ್ದ ವ್ಯಕ್ತಿಗೂ ಬಹುಷಃ ಪಶ್ಚಾತ್ತಾಪ ಕಾಡಿದೆ.

ಎರಡು ದಿನಗಳ ನಂತರ ಬಾರ್ ಗೆ ಕರೆ ಮಾಡಿದ ಆತ ಎಕ್ಸ್ ಪ್ರೆಸ್ ಮೇಲ್ ಕಳಿಸಿರೋದಾಗಿ ತಿಳಿಸಿದ್ದಾನೆ. ಆ ಮೇಲ್ ನಲ್ಲಿ ಕ್ಷಮಾಪಣೆ ಪತ್ರದ ಜೊತೆಗೆ ಕಳವಾಗಿದ್ದ ಬೆರಳು ಕೂಡ ವಾಪಸ್ ಬಂದಿದೆ.

ಅವತ್ತು ನಾನು ತುಂಬಾನೇ ಕುಡಿದಿದ್ದೆ, ಮನಸ್ಸು ಸ್ಥಿಮಿತದಲ್ಲಿ ಇರಲಿಲ್ಲ. ನಾನೊಬ್ಬ ಮೂರ್ಖ ಕುಡುಕ, ಕದ್ದಿದ್ದ ಬೆರಳನ್ನು ಆದಷ್ಟು ಬೇಗ ವಾಪಸ್ ಕಳಿಸಿದ್ದೇನೆ, ನನ್ನನ್ನು ಕ್ಷಮಿಸಿ ಬಿಡಿ ಅಂತಾ ಬರೆದಿದ್ದ.

ಬೆರಳು ಮರಳಿ ಸಿಕ್ಕಿದ್ರಿಂದ ಬಾರ್ ಮಾಲೀಕ ಫುಲ್ ಖುಷ್ ಆಗಿದ್ದಾರೆ. ಕಳ್ಳ ಅದನ್ನು ಬೇಗನೆ ವಾಪಸ್ ಕಳಿಸಿದ್ದು ಒಳ್ಳೆಯದಾಯ್ತು, ಯಾಕಂದ್ರೆ ಹೆಚ್ಚು ದಿನ ಅದನ್ನು ಉಪ್ಪಿನಿಂದ ಹೊರಕ್ಕೆ ಇಡುವಂತಿಲ್ಲ ಅಂತಾ ಹೇಳಿದ್ದಾರೆ.

ಬೆರಳು ಮರಳಿ ಸಿಕ್ಕ ಖುಷಿಯಲ್ಲಿ ಬಾರ್ ನಲ್ಲಿ ಪಾರ್ಟಿ ಕೂಡ ಜೋರಾಗಿಯೇ ಇತ್ತು. ಆ ಬೆರಳು ಬಳಕೆಗೆ ಯೋಗ್ಯವಾಗಿದೆಯೋ ಇಲ್ಲವೂ ಅನ್ನೋದನ್ನು ಕೂಡ ಪರೀಕ್ಷಿಸಲಾಗ್ತಿದೆ. ತಜ್ಞರು ಓಕೆ ಅಂದ್ರೆ ಮತ್ತೆ ಅದು ಬಿಯರ್ ಗ್ಲಾಸ್ ನಲ್ಲಿ ಕಾಣಿಸಿಕೊಳ್ಳಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...