alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆ ಶುಲ್ಕ ಕಟ್ಟಲು ಮೈ ಮಾರಿಕೊಳ್ಳುವ ಹುಡುಗೀರು

ss ap 19

ಮಕ್ಕಳಿಗೆ ಶಿಕ್ಷಣ, ಆಹಾರ ಸೇರಿದಂತೆ ಮೂಲ ಸೌಕರ್ಯಗಳನ್ನು ಒದಗಿಸುವುದು ಸಾಮಾಜಿಕ ಜವಾಬ್ದಾರಿ. ಆದರೆ, ಅದ್ಯಾವುದನ್ನು ಆಡಳಿತ ನಡೆಸುವವರು ಒದಗಿಸದಿದ್ದರೆ, ಇಂತಹ ಪರಿಸ್ಥಿತಿ ಬರುತ್ತದೆ. ಜೀವನ ನಡೆಸುವುದೇ ಕಷ್ಟವಾದಾಗ, ಮಕ್ಕಳ ಶಾಲೆಯ ದುಬಾರಿ ಶುಲ್ಕ ಕಟ್ಟುವುದು ಪೋಷಕರಿಗೆ ಹೇಗೆ ಸಾಧ್ಯ?

ಆಫ್ರಿಕಾದ ರಾಷ್ಟ್ರಗಳಲ್ಲಿ ಬಡತನ ತಾಂಡವವಾಡುತ್ತಿದೆ. ಸಿಯಾರ ಲಿಯೋನ್ ಎಂಬಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳು, ಶಾಲೆಯ ಶುಲ್ಕ ಕಟ್ಟಲು ವೇಶ್ಯಾವಾಟಿಕೆ ನಡೆಸುತ್ತಾರೆ. ಸಿಯಾರ ಲಿಯೋನ್ ನಲ್ಲಿ ಶಾಲೆಗಳಿಗೆ ಪ್ರವೇಶ ಪಡೆಯಲು, ವಾರ್ಷಿಕ ಸುಮಾರು 40 ಪೌಂಡ್ ಗೂ ಅಧಿಕ ಶುಲ್ಕ ನೀಡಬೇಕಿದೆ. ಇದರಿಂದ ಪೋಷಕರಿಗೆ ಮಕ್ಕಳನ್ನು ಓದಿಸಲು ಕಷ್ಟವಾಗಿದೆ. ಮೊದಲೇ ಬಡತನ ಇರುವುದದಿಂದ, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಪೋಷಕರಿಗೆ ಆಗೋದೇ ಇಲ್ಲ.

ಇದರಿಂದಾಗಿ, ಶಾಲೆಗೆ ಹೋಗುವ ಹೆಣ್ಣುಮಕ್ಕಳು ವೇಶ್ಯಾವಾಟಿಕೆ ಮೂಲಕ, ಹಣ ಸಂಪಾದಿಸಿ ಶಾಲೆಗೆ ಸೇರುತ್ತಾರೆ. ಇಂತಹ ಸಂದರ್ಭದಲ್ಲಿ ಸುರಕ್ಷತೆ ಬಗ್ಗೆ ಗೊತ್ತಿಲ್ಲದೇ, ಕಾಯಿಲೆಗೆ ತುತ್ತಾಗುತ್ತಾರೆ. ಇಲ್ಲವೇ ಗರ್ಭಿಣಿಯರಾಗುತ್ತಾರೆ. ಇಲ್ಲಿನ ಹೆಣ್ಣುಮಕ್ಕಳು ಶಿಕ್ಷಣ ಪಡೆಯಲು ಶೋಚನೀಯ ಪರಿಸ್ಥಿತಿ ಇದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...