alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್‌ ಸೇನಾ ಮುಖ್ಯಸ್ಥನನ್ನು ಆಲಂಗಿಸಿಕೊಂಡ ಸಿದ್ದು

ಕಾಂಗ್ರೆಸ್‌ ನಾಯಕ, ಭಾರತೀಯ ಕ್ರಿಕೆಟ್‌ ತಂಡದ ಮಾಜಿ ಆಟಗಾರ ನವ್‌ಜೋತ್‌ ಸಿಂಗ್‌ ಸಿದ್ದು, ಪಾಕ್‌ ಸೇನಾ ಪಡೆ ಮುಖ್ಯಸ್ಥ ಜನರಲ್‌ ಖಾಮರ್‌ ಜಾವೇದ್‌ ಬಜ್ವ ಅವರನ್ನು ಆಲಂಗಿಸಿಕೊಂಡಿದ್ದಾರೆ.

ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾದ ಇಬ್ಬರು ನಾಯಕರು, ಪರಸ್ಪರ ಕೈ ಮಿಲಾಯಿಸಿದ್ದಲ್ಲದೆ, ಆಲಂಗಿಸಿಕೊಂಡು ಶುಭಾಶಯ ಕೋರಿದ್ದಾರೆ.
ವಿದೇಶಿ ಆಹ್ವಾನಿತರ ನಡುವೆ ಕಾರ್ಯಕ್ರಮದಲ್ಲಿ ಸಿದ್ದು ಅವರಿಗೆ ಪಾಕ್‌ ಆಕ್ರಮಿತ ಪ್ರದೇಶದ ಅಧ್ಯಕ್ಷ ಮಸೂದ್‌ ಖಾನ್‌ ಪಕ್ಕದಲ್ಲೇ ಆಸನ ವ್ಯವಸ್ಥೆ ಮಾಡಲಾಗಿತ್ತು.

ಇಮ್ರಾನ್‌ ಖಾನ್‌ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ನೆರೆ ರಾಷ್ಟ್ರದ ನಾಯಕರನ್ನು, ಸಮಕಾಲೀನ ಸ್ನೇಹಿತರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಗೌರವ ನೀಡಿರುವುದಕ್ಕೆ ಸಮ. ಅವರ ಗೌರವವನ್ನು ನಾನು ಸ್ವಾಗತಿಸಿದ್ದೇನೆ. ಇಮ್ರಾನ್‌ ಖಾನ್‌ ಅವರ ನೇತೃತ್ವದ ಪಾಕ್‌ ಸರಕಾರ, ತನ್ನ ದೇಶದ ವ್ಯವಸ್ಥೆ, ದೇಶದ ಮೇಲಿರುವ ಅಪನಂಬಿಕೆಗಳನ್ನು ದೂರ ಮಾಡಲಿದೆ. ಇಮ್ರಾನ್‌ ಖಾನ್‌ ಅವರ ಮೇಲೆ ಹೆಚ್ಚಿನ ಭರವಸೆ ಇರುವುದಾಗಿ ಸಿದ್ದು ಹೇಳಿಕೆ ನೀಡಿದ್ದಾರೆ. ಭಾರತದ ಪಂಜಾಬ್‌ ಸರಕಾರದಲ್ಲಿ ಸಚಿವರಾಗಿರುವ ಸಿದ್ದು, ವಿರೋಧದ ನಡುವೆಯೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...