alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬಿದ್ರೆ ನಂಬಿ ಬಿಟ್ರೆ ಬಿಡಿ…! ಐಫೋನ್ ನಲ್ಲಿ ಚಿತ್ರೀಕರಣಗೊಂಡಿದೆ ಈ ಸಿನೆಮಾ

ಬ್ರೊಕೊವಿಚ್, ಸೆಕ್ಸ್, ಲೈಸ್, ವಿಡಿಯೋ ಟೇಪ್ ನಂತಹ ಹಿಟ್ ಚಿತ್ರಗಳನ್ನು ಕೊಟ್ಟಿರೋ ಹಾಲಿವುಡ್ ನಿರ್ದೇಶಕ ಸ್ಟೀವನ್ ಹೊಸ ಸಿನೆಮಾವೊಂದನ್ನು ಮಾಡಿದ್ದಾರೆ. ಬರ್ಲಿನ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಈ ಚಿತ್ರ ಪ್ರದರ್ಶನ ಕಾಣ್ತಿದೆ.

ವಿಶೇಷ ಅಂದ್ರೆ ಕೇವಲ 2 ವಾರಗಳಲ್ಲಿ ಈ ಚಿತ್ರದ ಶೂಟಿಂಗ್ ಮುಗಿದಿದೆ. ಚಿತ್ರೀಕರಣಕ್ಕೆ ಯಾವುದೇ ಕ್ಯಾಮರಾ ಬಳಸಿಲ್ಲ. ‘Unsane’ ಹೆಸರಿನ ಈ ಸಿನೆಮಾವನ್ನು ಪೂರ್ತಿ ಐಫೋನ್ ನಲ್ಲೇ ಚಿತ್ರೀಕರಿಸಲಾಗಿದೆ.

ಹಿಂಬಾಲಕನಿಂದ ತಪ್ಪಿಸಿಕೊಳ್ಳಲು ಯುವತಿಯೊಬ್ಬಳು ಬೇರೆ ನಗರಕ್ಕೆ ಬರ್ತಾಳೆ. ಆದ್ರೆ ಅದೇ ವ್ಯಕ್ತಿ ಕೆಲಸ ಮಾಡ್ತಿದ್ದ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಅಡ್ಮಿಟ್ ಆಗ್ತಾಳೆ. ಇದು ಚಿತ್ರದ ಕಥೆ. ಐಫೋನ್ ನಲ್ಲೇ ಚಿತ್ರೀಕರಣ ಮಾಡಿರೋದು ನಿರ್ದೇಶಕರಿಗೆ ಹೊಸ ಅನುಭವ. ಹಳೆಯ ಶೂಟಿಂಗ್ ಪದ್ಧತಿಯನ್ನು ಬಿಟ್ಟು ಹೊಸದೇನನ್ನಾದ್ರೂ ಮಾಡಬೇಕು ಅನ್ನೋ ತುಡಿತದಿಂದ ಈ ಸಾಹಸಕ್ಕೆ ಕೈಹಾಕಿದ್ದಾರೆ.

ಮೊಬೈಲ್ ನಲ್ಲಿ ಶೂಟಿಂಗ್ ಮಾಡೋದ್ರಿಂದ ಅನುಕೂಲಗಳು ಸಾಕಷ್ಟಿವೆ. ಕ್ಯಾಮರಾ ಅರೇಂಜ್ಮೆಂಟ್ಸ್ ಬೇಕಾಗಿಲ್ಲ, ಸೀಲಿಂಗ್ ಗೆ ರಂಧ್ರ ಕೊರೆದು ಅಲ್ಲೆಲ್ಲಾ ಅಡ್ಜಸ್ಟ್ ಮೆಂಟ್ ಮಾಡಬೇಕಾಗಿಲ್ಲ. ಚಿತ್ರೀಕರಣ ಬಹಳ ವೇಗವಾಗಿ ನಡೆಯುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...