alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೃದ್ದೆ ಏನೂ ಕಮ್ಮಿ ಇಲ್ಲ ಬಿಡಿ..!

Shoplifting granny caught red-handed hiding entire weekly shop down her underwearಸ್ಕರ್ಟ್ ಧರಿಸಿ ಶಾಪಿಂಗ್ ಮಾಡಲೆಂದು ಅಂಗಡಿಗೆ ಬಂದಿದ್ದ ಆ ವೃದ್ದೆ ಮೇಲೆ ಸೆಕ್ಯುರಿಟಿಯವನಿಗೇಕೋ ಅನುಮಾನ ಬಂದಿತ್ತು. ಶಾಪಿಂಗ್ ಮುಗಿಸಿ ಆಕೆ ಹೊರಟು ನಿಂತಾಗ ವೃದ್ದೆಯ ತಪಾಸಣೆ ಮಾಡಲು ಸೆಕ್ಯುರಿಟಿಯವನು ಮುಂದಾದಾಗ ಅದಕ್ಕೆ ಅಲ್ಲಿದ್ದವರು ಆಕ್ಷೇಪಿಸಿದ್ದರು. ಆದರೂ ಪಟ್ಟು ಬಿಡದೆ ತಪಾಸಣೆ ನಡೆಸಿದಾಗ ಅಚ್ಚರಿ ಕಾದಿತ್ತು.

ಹೌದು, ಇಂತದೊಂದು ಘಟನೆ ಮೆಕ್ಸಿಕೋದ ಸೂಪರ್ ಮಾರ್ಕೆಟ್ ನಲ್ಲಿ ನಡೆದಿದೆ. ತಪಾಸಣೆ ವೇಳೆ ವೃದ್ದೆಯ ಒಳ ಉಡುಪಿನಲ್ಲಿ ಅಡಗಿಸಿಟ್ಟಿದ್ದ ಬೆಲೆ ಬಾಳುವ ಹಲವು ವಸ್ತುಗಳು ಪತ್ತೆಯಾಗಿವೆ. ಈ ಚಾಲಾಕಿ ವೃದ್ದೆ, ಹೆಸರಿಗೆ ಒಂದಷ್ಟು ಖರೀದಿಸಿ ಇನ್ನುಳಿದ ವಸ್ತುಗಳನ್ನು ಕದ್ದು ಯಾರಿಗೂ ಕಾಣದಂತೆ ತನ್ನ ಒಳ ಉಡುಪಿನಲ್ಲಿ ಅಡಗಿಸಿಟ್ಟುಕೊಂಡಿದ್ದಳು.

ಇದೀಗ ಚಾಲಾಕಿ ವೃದ್ದೆಯನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಈಕೆ ಈ ಹಿಂದೆಯೂ ಇಂತಹ ಕೃತ್ಯವೆಸಗಿದ್ದಳೆ ಎಂಬುದರ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅಮಾಯಕಿಯಂತೆ ಕಾಣುತ್ತಿದ್ದ ವೃದ್ದೆಯ ಕೈ ಚಳಕ ಕಣ್ಣ ಮುಂದೆಯೇ ಬಯಲಾದ ನಂತರ ಮೊದಲು ಆಕೆ ಪರ ವಾದಿಸಿದ್ದವರು ಅವಡುಗಚ್ಚಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...