alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಲೆಗೆ ಹೋಗಲು ಎಬ್ಬಿಸಿದ್ದಕ್ಕೆ ನಡೆಯಿತು ಘೋರ ಕೃತ್ಯ

Shooting amerca

ಕೆಲವು ಮಕ್ಕಳಿಗೆ ನಿದ್ದೆ ಜಾಸ್ತಿ. ಅದರಲ್ಲಿಯೂ ಶಾಲೆಗೆ ಹೋಗಬೇಕೆಂದರೆ ಆಗೋದೇ ಇಲ್ಲ. ಯಾರಾದರೂ ಹೊತ್ತಾಯ್ತು ಬೇಗ ಎದ್ದು ರೆಡಿಯಾಗು ಎಂದರೆ ಸಹಿಸಿಕೊಳ್ಳಲು ಕೆಲವರಿಗಂತೂ ಆಗಲ್ಲ. ಹೀಗೆ ಶಾಲೆಗೆ ಹೋಗಲು ಬೇಗನೆ ಏಳುವಂತೆ ಅಮ್ಮ ಬಲವಂತ ಮಾಡಿದ್ದಕ್ಕೆ ಬಾಲಕನೊಬ್ಬ ಏನು ಮಾಡಿದ್ದಾನೆ ಗೊತ್ತಾ?

ಶಾಲೆಗೆ ಹೊತ್ತಾಯ್ತು ಬೇಗ ಎದ್ದು ರೆಡಿಯಾಗು ಎಂದು ಮಲಗಿದ್ದ ಮಗನಿಗೆ ಅಮ್ಮ ಹೇಳಿದ್ದಕ್ಕೆ, ಕೋಪಗೊಂಡ ಬಾಲಕ ಮನೆಯಲ್ಲಿದ್ದವರ ಮೇಲೆಲ್ಲಾ ಗುಂಡು ಹಾರಿಸಿದ ಘಟನೆ ಅಮೆರಿಕದಲ್ಲಿ ನಡೆದಿದೆ. ಅಮೆರಿಕದ ನ್ಯಾಶ್ ವಿಲ್ಲೆ ಎಂಬಲ್ಲಿ ತಾಯಿ ಶೆರಿಲ್ ವಿಲಿಯಮ್ಸ್ ಹಾಗೂ ಅಜ್ಜಿ ಹಿಯರ್ ಲೈಲ್ ಹಿಲ್ ಅವರು 16 ವರ್ಷದ ಬಾಲಕನಿಗೆ ಶಾಲೆಗೆ ಹೋಗಲು ಎಬ್ಬಿಸಿದ್ದು, ಆತ ಸಿಟ್ಟಿನಿಂದ ಬೀರುವಿನಲ್ಲಿಟ್ಟಿದ್ದ ಪಿಸ್ತೂಲ್ ತಂದು ಗುಂಡು ಹಾರಿಸಿದ್ದಾನೆ.

ಬಾಲಕನ ಅಜ್ಜಿ ಹಾಗೂ ಮನೆಯಲ್ಲಿದ್ದ ಸಹೋದರಿ, ಸಹೋದರರ ಮೇಲೆ ಗುಂಡು ಹಾರಿಸಿದ್ದು, ಅಮ್ಮ ಬಚಾವಾಗಿದ್ದಾಳೆ. ಮೂವರನ್ನೂ ಆಸ್ಪತ್ರೆಗೆ ಸೇರಿಸಲಾಗಿದೆ. ಬಾಲಕ ಮನೆಯಿಂದ ಹೊರಗೆ ಹೋಗಿದ್ದು, ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಬಾಲಕ ಸಮೀಪದಲ್ಲಿ ಎಸೆದಿದ್ದ ಪಿಸ್ತೂಲ್ ವಶಕ್ಕೆ ಪಡಡೆದುಕೊಂಡು ಮುಂದಿನ ಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...