alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಸೈಂಟಿಸ್ಟ್ ಹುಚ್ಚಾಟಕ್ಕೆ ಏನಂತಿರೋ..!

andreas-wahl-1

ವಿಜ್ಞಾನಿಗಳಿಗೆ ಕುತೂಹಲ ಜಾಸ್ತಿ, ಸಂಶೋಧನೆ ಸಂದರ್ಭದಲ್ಲಿ ಏನಾದರೂ ಹೊಳೆದರೆ ತಕ್ಷಣಕ್ಕೆ ಅದನ್ನು ಕಾರ್ಯರೂಪಕ್ಕೆ ತಂದು ಬಿಡುತ್ತಾರೆ. ಕೆಲವೊಮ್ಮೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಯೋಚಿಸುವುದಕ್ಕಿಂತ ಹೆಚ್ಚಾಗಿ ತಮ್ಮ ಪ್ರಯೋಗದ ಬಗ್ಗೆಯೇ ತಲೆಕೆಡಿಸಿಕೊಂಡಿರುತ್ತಾರೆ.

ಹೀಗೆ ಪ್ರಯೋಗ ಮಾಡಲು ಹೋದ ವಿಜ್ಞಾನಿಯೊಬ್ಬರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದ ಘಟನೆ ನಾರ್ವೆಯಲ್ಲಿ ನಡೆದಿದೆ. ಈ ವಿಜ್ಞಾನಿಗೆ ಪ್ರಯೋಗ ಮಾಡುವ ಮೊದಲು ತನ್ನ ಪ್ರಾಣವೇ ಹಾರಿ ಹೋದೀತು ಎಂಬ ಕಲ್ಪನೆಯೂ ಇರಲಿಲ್ಲ. ನಾರ್ವೆಯ ಭೌತ ವಿಜ್ಞಾನಿ ಆಂಡ್ರಿಯಾನ್ ವಾಲ್ ಅವರು ನೀರಿನೊಳಗೆ ಗುಂಡು ಹಾರಿಸಿದರೆ ಯಾವ ಪರಿಣಾಮ ಉಂಟಾಗುತ್ತದೆ ಎಂಬುದರ ಬಗ್ಗೆ ಸಂಶೋಧನೆ ಕೈಗೊಂಡಿದ್ದರು.ತಾವೇ ಗುಂಡು ಹೊಡೆದುಕೊಳ್ಳಲು ತೀರ್ಮಾನಿಸಿದ ಅವರು ಎಲ್ಲಾ ತಯಾರಿ ಮಾಡಿಕೊಂಡಿದ್ದಾರೆ.

ಟ್ರೈಪಾಡ್ ಗೆ ರೈಫಲ್ ಕಟ್ಟಿ ಟ್ರಿಗರ್ ಅನ್ನು ಹಗ್ಗದ ಮೂಲಕ ಒತ್ತಲು ರೆಡಿಯಾಗಿ ಇದನ್ನೆಲ್ಲಾ ಸೆರೆಹಿಡಿಯಲು ಕ್ಯಾಮೆರಾ ಕೂಡ ಅಳವಡಿಸಿದ್ದರು. ಹೀಗೆ ಪ್ರಯೋಗಾಲಯದಲ್ಲಿ ತಮಗೆ ತಾವೇ ನೀರಿನಲ್ಲಿ ಶೂಟ್ ಮಾಡಿಕೊಂಡ ಅವರಿಗೆ ಸದ್ಯ ಏನೂ ಆಗಲಿಲ್ಲ. ನೀರಿನಲ್ಲಿ ಬುಲೆಟ್ ಹೆಚ್ಚು ದೂರ ಕ್ರಮಿಸುವುದಿಲ್ಲ ಎಂಬುದು ಅವರಿಗೆ ಇದರಿಂದ ಮನವರಿಕೆಯಾಗಿದೆಯಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...