alex Certify
ಕನ್ನಡ ದುನಿಯಾ       Mobile App
       

Kannada Duniya

ನೋಡುಗರನ್ನು ಬೆಚ್ಚಿ ಬೀಳಿಸುತ್ತೆ ಈ ವಿಡಿಯೋ

ಗ್ರಹಚಾರ ಕೆಟ್ಟರೆ ಹುಲ್ಲೂ ಹಾವಾಗತ್ತಂತೆ! ಗಟ್ಟಿ ಇದ್ದ ರಸ್ತೆಯೂ ಕುಸಿಯುತ್ತೆ…!
ಹೌದು. ಇಲ್ಲಿ ಆಗಿದ್ದೂ ಅದೇ….ಚೀನಾದ ಲಾನ್ಝೌ ನಗರದ ಫುಟ್ ಪಾತ್ ನಲ್ಲಿ ಮಹಿಳೆಯೊಬ್ಬಳು ನಡೆದುಹೋಗುತ್ತಿದ್ದಾಗ ಇದ್ದಕ್ಕಿದ್ದಂತೆ ರಸ್ತೆಯೇ ಕುಸಿದಿದೆ. ಆಕೆಯೂ ಅವುಗಳ ಅವಶೇಷಗಳ ಅಡಿ ಸಿಲುಕಿದ ಘಟನೆ ನಡೆದಿದ್ದು, ಈ ಆಘಾತಕಾರಿ ವಿಡಿಯೋ ಈಗ ವೈರಲ್ ಆಗಿದೆ.

ಎಲ್ಲರೂ ನಡೆದುಹೋಗುತ್ತಿದ್ದಂತೆ ಈ ಮಹಿಳೆಯೂ ತನ್ನಷ್ಟಕ್ಕೆ ಸಂಚರಿಸುತ್ತಿದ್ದಳು. ಆದರೆ, ಆಕೆ ಆ ಜಾಗದಲ್ಲಿ ಕಾಲಿಟ್ಟ ಕೂಡಲೇ ಒಮ್ಮೆಲೇ ಕುಸಿದಿದ್ದು, ಸುಮಾರು 2 ಅಡಿ ಅಗಲದಷ್ಟು ಜಾಗದ ಮಣ್ಣಿನ ಸಹಿತ ಕೆಳಗೆ ಬಿದ್ದಿದ್ದಾಳೆ. ಆಗ ಅಲ್ಲೇ ಇದ್ದ ಸ್ಥಳೀಯರು ಹಾಗೂ ಪೊಲೀಸರು ಆಕೆಯನ್ನು ಹೊರತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಈ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮಹಿಳೆ ನಡೆದು ಬರುತ್ತಿರುವ ಹಾಗೂ ಭೂಮಿ ಕುಸಿದು ಆಕೆ ಸಿಲುಕಿಕೊಂಡಿರುವ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಲ್ಲದೆ, ಯೂಟ್ಯೂಬ್ ನಲ್ಲಿ ಆಕೆ ಶೀಘ್ರ ಗುಣಮುಖವಾಗುತ್ತಾಳೆ ಎಂದು ಕೆಲವರು ಪ್ರತಿಕ್ರಿಯಿಸಿದರೆ, ಮತ್ತೆ ಕೆಲವರು ತಕ್ಷಣ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ ಧನ್ಯವಾದ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...