alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಪ್ ಹಿಡಿದು ರಸ್ತೆಗಿಳಿದ ಮಹಿಳೆ ಬಕೆಟ್ ನಲ್ಲಿತ್ತು ಇಂಥ ವಸ್ತು

ಅಮೆರಿಕಾದ ಕೆಂಟುಕಿಯಲ್ಲಿ ಮಹಿಳೆಯೊಬ್ಬಳು ಮಾಪ್ ಮತ್ತು ಬಕೆಟ್ ಹಿಡಿದು ರಸ್ತೆಗಿಳಿದಿದ್ದಳು. ಮಹಿಳೆ ನೋಡಿ ಸ್ಥಳೀಯರು ಆಶ್ಚರ್ಯಕ್ಕೊಳಗಾಗಿದ್ದರು. ಮಹಿಳೆ ಯಾಕೆ ಹೀಗೆ ಮಾಡ್ತಿದ್ದಾಳೆಂಬ ಗೊಂದಲ ಜನರನ್ನು ಕಾಡಿತ್ತು. ಹತ್ತಿರ ಹೋಗಿ ಮಹಿಳೆ ಏನು ಮಾಡ್ತಿದ್ದಾಳೆಂಬುದನ್ನು ನೋಡಿದ ಜನರು ಒಮ್ಮೆ ಭಯಗೊಂಡಿದ್ದರು.

ಮಹಿಳೆ ಬಕೆಟ್ ಒಳಗಿದ್ದ ವಸ್ತು ಅಲುಗಾಡಲು ಶುರುವಾಗಿತ್ತು. ಬಕೆಟ್ ಒಳಗೆ ಕಪ್ಪು ಬಣ್ಣದ ಮಾಪ್ ನೋಡಿ ಜನರು ಮೊದಲು ಆಶ್ಚರ್ಯಗೊಂಡಿದ್ದರು. ಸತ್ಯ ಗೊತ್ತಾದ ಮೇಲೆ ನಗಲು ಶುರುಮಾಡಿದ್ದರು. ಅಷ್ಟಕ್ಕೂ ಮಹಿಳೆ ಹಿಡಿದಿದ್ದು ಮಾಪ್ ಆಗಿರಲಿಲ್ಲ. ಬದಲಾಗಿ ಕಪ್ಪು ಬಣ್ಣದ ಸಾಕು ನಾಯಿಯಾಗಿತ್ತು.

ಮಹಿಳೆ ಸ್ಪರ್ಧೆಗಾಗಿ ನಾಯಿಯನ್ನು ಈ ರೀತಿ ಸಿದ್ಧಪಡಿಸಿದ್ದಳು. ನಾಯಿಯನ್ನು ಮಹಿಳೆ ರೆಡಿ ಮಾಡಿದ್ದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಸ್ವಲ್ಪವೂ ಅನುಮಾನ ಬರದಂತೆ ನಾಯಿಯನ್ನು ಸಿದ್ಧಪಡಿಸಿದ್ದಳು ಮಹಿಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...