alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಜರಿ ಬಳಿಕ ಇಕ್ಕಳವನ್ನು ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿದ ವೈದ್ಯ

ಲಂಡನ್ ನ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಭಾರೀ ಪ್ರಮಾದವೊಂದನ್ನು ಮಾಡಿದ್ದಾರೆ. ಆಪರೇಷನ್ ಬಳಿಕ 9 ಇಂಚು ಉದ್ದದ 2 ಇಕ್ಕಳಗಳನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟು ಹೊಲಿಗೆ ಹಾಕಿಬಿಟ್ಟಿದ್ದಾರೆ.

ಸುಮಾರು 10 ದಿನಗಳ ನಂತರ ಮಹಿಳೆಗೆ ತೀವ್ರ ಹೊಟ್ಟೆನೋವು ಶುರುವಾಗಿತ್ತು. ಆಗ ವೈದ್ಯರು ಮಾಡಿದ ಯಡವಟ್ಟು ಬೆಳಕಿಗೆ ಬಂದಿದೆ. ಮಹಿಳೆಗೆ ಸ್ಕ್ಯಾನಿಂಗ್ ಮಾಡಿದಾಗ ಹೊಟ್ಟೆಯಲ್ಲಿದ್ದ ಇಕ್ಕಳಗಳು ಕಾಣಿಸಿವೆ. ಹೊಟ್ಟೆಯಲ್ಲಿ ಎರಡೂ ಇಕ್ಕಳಗಳು ಅದು ಲಂಬವಾಗಿ ಬಿದ್ದುಕೊಂಡಿತ್ತು.

ನಂತರ ಮತ್ತೆ ಶಸ್ತ್ರಚಿಕಿತ್ಸೆ ನಡೆಸಿ ಇಕ್ಕಳಗಳನ್ನು ಮಹಿಳೆಯ ಹೊಟ್ಟೆಯಿಂದ ಹೊರತೆಗೆಯಲಾಗಿದೆ. ಲಂಡನ್ ನ Guy’s and St Thomas’ ಎಂಭ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಫ್ರಾನ್ಸ್ ನಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು.

ಆಪರೇಷನ್ ಬಳಿಕ ವೈದ್ಯರು ರಬ್ಬರ್ ಗ್ಲೌಸ್ ಮತ್ತು 5 ಬ್ಯಾಂಡೇಜ್ ಬಟ್ಟೆಗಳನ್ನು ಮಹಿಳೆಯ ಹೊಟ್ಟೆಯಲ್ಲೇ ಬಿಟ್ಟಿದ್ದರು. ಆಗಿನಿಂದ ಮಹಿಳೆಗೆ ಋತುಸ್ರಾವ ನಿಂತುಹೋಗಿತ್ತು. ತಾನು ಗರ್ಭಿಣಿಯೆಂದೇ ಆಕೆ ಭಾವಿಸಿದ್ದಳು. ಆದ್ರೆ ನಂತರ ಹೊಟ್ಟೆಯಲ್ಲಿ ಗ್ಲೌಸ್ ಮತ್ತು ಬಟ್ಟೆ ಇರುವುದು ಪತ್ತೆಯಾಗಿತ್ತು. ಆಪರೇಷನ್ ಮೂಲಕ ಅವನ್ನೆಲ್ಲ ಹೊರತೆಗೆಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...