alex Certify
ಕನ್ನಡ ದುನಿಯಾ       Mobile App
       

Kannada Duniya

ಹೌಹಾರಿದ್ರು ಈ ಭಯಾನಕ ದೃಶ್ಯವನ್ನು ಕಂಡ ಜನ

ಬರೋಬ್ಬರಿ 17 ಅಡಿ ಉದ್ದದ ಕಾಳಿಂಗ ಸರ್ಪವೊಂದು ಹೆಬ್ಬಾವನ್ನೇ ಕೊಂದು ಹಾಕಿದ ಘಟನೆ ಥೈಲ್ಯಾಂಡ್ ನಲ್ಲಿ ನಡೆದಿದೆ.

ಕ್ರೋಬಿ ಪ್ರಾಂತ್ಯದಲ್ಲಿರುವ ರೆಸಾರ್ಟ್ ನಲ್ಲಿ ಈ ಭಯಾನಕ ದೃಶ್ಯವನ್ನು ಕಂಡ ಜನ ಹೌಹಾರಿದ್ದಾರೆ. ರೆಸಾರ್ಟ್ ನಲ್ಲಿರುವ ಮರವೊಂದರ ಬಳಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ನುಂಗಲು 5 ಅಡಿಗೂ ಹೆಚ್ಚು ಉದ್ದದ ಹೆಬ್ಬಾವು ಯತ್ನಿಸಿದೆ.

ಇದರಿಂದ ಆಕ್ರೋಶಗೊಂಡ ಕಾಳಿಂಗ ಸರ್ಪ, ಹೆಬ್ಬಾವಿನೊಂದಿಗೆ ಕಾದಾಟ ನಡೆಸಿದೆ. ಕಾದಾಟದಲ್ಲಿ ಹೆಬ್ಬಾವು ನಿತ್ರಾಣಗೊಂಡು ಸಾವನ್ನಪ್ಪಿದೆ.

ಇದನ್ನು ಕಂಡ ಜನ ವನ್ಯಜೀವಿ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಸ್ಥಳೀಯರ ನೆರವಿನಿಂದ ಸುಮಾರು 5 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ.

ಬಳಿಕ ಅದನ್ನು ಕಾಡಿನಲ್ಲಿ ಬಿಡಲಾಗಿದೆ. ಬೃಹತ್ ಕಾಳಿಂಗ ಸರ್ಪದ ಕಾದಾಟ ಮತ್ತು ಅದನ್ನು ಸೆರೆಹಿಡಿದ ದೃಶ್ಯವನ್ನು ಅಲ್ಲಿದ್ದವರು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...