alex Certify
ಕನ್ನಡ ದುನಿಯಾ       Mobile App
       

Kannada Duniya

ಬೆರಗುಗೊಳಿಸುತ್ತೆ ಇರಾನಿ ಶ್ರೀಮಂತ ಮಹಿಳೆಯರ ಜೀವನ ಶೈಲಿ

ಮುಸ್ಲಿಂ ರಾಷ್ಟ್ರ ಇರಾಕ್ ನಲ್ಲಿ ಅತ್ಯಂತ ಕಠಿಣ ಷರಿಯಾ ಕಾನೂನಿದೆ. ಇಲ್ಲಿ ಮಹಿಳೆಯರು ಬುರ್ಕಾ ಧರಿಸುವುದು ಕಡ್ಡಾಯ. ಕೆಲವು ಪ್ರದೇಶಗಳಲ್ಲಿ ಬುರ್ಕಾ ಧರಿಸದೆ ಹೋದ್ರೆ ಮಹಿಳೆಯರ ಹತ್ಯೆ ನಡೆಯುತ್ತದೆ. ಕಠಿಣ ಕಾನೂನು ಪಾಲನೆ ಮಾಡುವ ಈ ದೇಶದ ಇನ್ನೊಂದು ಭಾಗದಲ್ಲಿ ಮಹಿಳೆಯರ ಜೀವನ ಶೈಲಿ ಆಶ್ಚರ್ಯ ಹುಟ್ಟಿಸುವಂತಿದೆ.

ಅಲ್ಲಿ ಮಹಿಳೆಯರು ಬರ್ಕಾ ಧರಿಸುವುದಿಲ್ಲ. ತಮಗಿಷ್ಟವಾಗುವ ಬಟ್ಟೆ ತೊಡುವ ಜೊತೆಗೆ ಧೂಮಪಾನ, ಮದ್ಯಪಾನ ಕೂಡ ಮಾಡ್ತಾರೆ. ಶ್ರೀಮಂತ ಮನೆತನದ ಹೆಣ್ಣು ಮಕ್ಕಳಿಗೆ ಇರಾಕ್ ನಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಇನ್ಸ್ಟ್ರಾಗ್ರಾಮ್ ನಲ್ಲಿ ಫೋಸ್ಟ್ ಆಗಿರುವ ಕೆಲ ಫೋಟೋಗಳು ಆಶ್ಚರ್ಯ ಹುಟ್ಟಿಸುತ್ತವೆ.

ಇರಾಕ್ ಮಹಿಳೆಯರ ಮೇಲೆ ನಡೆದ ಸರ್ವೆಯೊಂದರಲ್ಲಿ ಅನೇಕ ವಿಷ್ಯಗಳು ಬಹಿರಂಗವಾಗಿವೆ. ಮಧ್ಯಮ ಹಾಗೂ ಬಡವರ್ಗದ ಜನರು ಸಂಪ್ರದಾಯದ ಹೆಸರಿನಲ್ಲಿ ಶೋಷಣೆಗೊಳಗಾಗ್ತಾರೆ. ಶೇಕಡಾ 19ರಷ್ಟು ಮಹಿಳೆಯರು ಮಾನಸಿಕ ತೊಂದರೆಯಿಂದ ಬಳಲುತ್ತಾರಂತೆ. ಆದ್ರೆ ಶ್ರೀಮಂತ ಮನೆತನದ ಹೆಣ್ಣು ಮಕ್ಕಳು ಬಿಂದಾಸ್ ಜೀವನ ನಡೆಸ್ತಾರಂತೆ. ತಮಗಿಷ್ಟವಾಗುವಂತೆ ಬದುಕುವ ಹೆಣ್ಣು ಮಕ್ಕಳು ಸಾಮಾಜಿಕ ಜಾಲತಾಣಗಳಿಗೆ ಐಷಾರಾಮಿ ಫೋಟೋಗಳನ್ನು ಹಾಕಿ ಎಲ್ಲರನ್ನೂ ಬೆರಗುಗೊಳಿಸುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...