alex Certify
ಕನ್ನಡ ದುನಿಯಾ       Mobile App
       

Kannada Duniya

ಖ್ಯಾತ ಕ್ರಿಕೆಟಿಗನ ಮೇಲಿನ ಆರೋಪ ಕೇಳಿದ್ರೆ ಶಾಕ್ ಆಗ್ತೀರಾ

ಪಾಕಿಸ್ತಾನದ ಮಾಜಿ ಕ್ರಿಕೆಟರ್ ಹಾಗೂ ರಾಜಕಾರಣಿ ಇಮ್ರಾನ್ ಖಾನ್ ರ ಮಾಜಿ ಪತ್ನಿ ರೆಹಾಮ್ ಖಾನ್, ಪುಸ್ತಕವೊಂದನ್ನು ಬರೆದಿದ್ದು, ಈ ಪುಸ್ತಕದಲ್ಲಿ ಸಾಕಷ್ಟು ಸ್ಪೋಟಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

ಪಾಕಿಸ್ತಾನದ ಖ್ಯಾತ ಕ್ರಿಕೆಟ್ ಆಟಗಾರರಾದ ವಾಸಿಮ್ ಅಕ್ರಮ್ ಕುರಿತು ಬೆಚ್ಚಿ ಬೀಳಿಸುವ ಸಂಗತಿಯೊಂದನ್ನು ತಿಳಿಸಿದ್ದಾರೆನ್ನಲಾಗಿದ್ದು, ಅದರಲ್ಲಿ ವಾಸಿಮ್ ಅಕ್ರಮ್ ತಮ್ಮ ಸೆಕ್ಸ್ ತೆವಲಿಗಾಗಿ ತಮ್ಮ ಮಾಜಿ ಪತ್ನಿ ಹುಮಾ ಅವರನ್ನು ಪರ ಪುರುಷರ ಜತೆ ಮಲಗಲು ಬಿಡುತ್ತಿದ್ದರೆಂಬ ಅರೋಪವನ್ನು ರೆಹಾಮ್ ಖಾನ್ ತಮ್ಮ ಪುಸ್ತಕದಲ್ಲಿ ಮಾಡಿದ್ದಾರೆಂದು ಹೇಳಲಾಗಿದೆ.

ಪಾಕಿಸ್ತಾನದ ಹಲವು ಖ್ಯಾತನಾಮರ ಅಸಲಿಯತ್ತನ್ನೂ ಈ ಪುಸ್ತಕದಲ್ಲಿ ಬಿಚ್ಚಿಡಲಾಗಿದೆ ಎನ್ನಲಾಗಿದ್ದು, ಇದು ಬಿಡುಗಡೆಗೊಂಡ ಬಳಿಕ ಪಾಕಿಸ್ತಾನದ ರಾಜಕೀಯ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ಅಲ್ಲೋಲಕಲ್ಲೋಲವಾಗಬಹುದೆಂಬ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿಯೇ ಪುಸ್ತಕ ಬಿಡುಗಡೆ ಮಾಡದಂತೆ ರೆಹಾಮ್ ಖಾನ್ ಮೇಲೆ ಒತ್ತಡ ಹೇರಲಾಗುತ್ತಿದೆಯಲ್ಲದೇ ನ್ಯಾಯಾಲಯದ ಮೂಲಕವೂ ತಡೆಯಾಜ್ಞೆ ತರಲು ಯತ್ನಿಸಲಾಗುತ್ತಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...