alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಪಾಠಿಗಳಿಂದ್ಲೇ ಅತ್ಯಾಚಾರ: ಭಾರತದ ವಿದ್ಯಾರ್ಥಿ ದಾರುಣ ಸಾವು

boy_raped_nhaveen_1_14976

ಮಲೇಷಿಯಾದಲ್ಲಿ ಭಾರತೀಯ ಮೂಲದ ಶಾಲಾ ವಿದ್ಯಾರ್ಥಿಯೊಬ್ಬನ ಮೇಲೆ ಸಹಪಾಠಿಗಳಿಂದ್ಲೇ ಅತ್ಯಾಚಾರ ನಡೆದಿದ್ದು, ಆತ ಮೃತಪಟ್ಟಿದ್ದಾನೆ. 18 ವರ್ಷದ ಟಿ.ನವೀನ್ ಮೃತ ದುರ್ದೈವಿ. ಕಳೆದ ವಾರ ಸ್ನೇಹಿತನ ಜೊತೆಗೆ ನವೀನ್ ಬರ್ಗರ್ ಶಾಪ್ ಗೆ ತೆರಳಿದ್ದ.

ಅಂಗಡಿಯ ಹೊರಗೆ ಆತನ ಮೇಲೆ ಸಹಪಾಠಿಗಳು ಹಲ್ಲೆ ನಡೆಸಿದ್ದಾರೆ. ನವೀನ್ ಸಲಿಂಗಿ ಎಂದು ಭಾವಿಸಿ ಹಲವು ಗಂಟೆಗಳ ಕಾಲ ಆತನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥಗೊಂಡಿದ್ದ ನವೀನ್ ನನ್ನು ಪೆನಾಂಗ್ ನ ಆಸ್ಪತ್ರೆಯಲ್ಲಿ ಐಸಿಯುಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ನವೀನ್ ಸಾವನ್ನಪ್ಪಿದ್ದಾನೆ.

ಬೆಳಗಿನ ಜಾವ 2.20 ರ ವೇಳೆಗೆ ನವೀನ್ ಮೇಲೆ ದೌರ್ಜನ್ಯ ನಡೆದಿದೆ. ಮೊದಲು ಇಬ್ಬರು ಹುಡುಗರು ಅವನನ್ನು ಚುಡಾಯಿಸ್ತಾ ಇದ್ರು. ನಂತರ ತಮ್ಮ ಸ್ನೇಹಿತರನ್ನೆಲ್ಲಾ ಜೊತೆಗೆ ಕರೆದುಕೊಂಡು ದುಷ್ಕೃತ್ಯ ನಡೆಸಿದ್ದಾರೆ. ನವೀನ್ ಸ್ನೇಹಿತ ಸ್ಥಳದಿಂದ ಓಡಿಹೋಗಿ ತಪ್ಪಿಸಿಕೊಂಡಿದ್ದ.

ಆದ್ರೆ ನವೀನ್ ನನ್ನು ಹೊಲಕ್ಕೆ ಎಳೆದು ತಂದ ಕ್ರೂರಿಗಳು ಹಲ್ಲೆ ನಡೆಸಿ, ಅತ್ಯಾಚಾರ ಎಸಗಿದ್ದಾರೆ. ಆತನ ಖಾಸಗಿ ಅಂಗಗಳನ್ನೂ ಘಾಸಿಗೊಳಿಸಿದ್ದಾರೆ. ಐವರು ಕಾಮುಕರ ಈ ಕೃತ್ಯದಿಂದ ನಲುಗಿದ್ದ ನವೀನ್ ಗೆ ಬ್ರೈನ್ ಡೆಡ್ ಆಗಿತ್ತು. ಐವರು ಕಾಮುಕರನ್ನು ಪೊಲೀಸರು ಬಂಧಿಸಿದ್ದಾರೆ. ಮೃದು ಸ್ವಭಾವದವನಾಗಿದ್ದರಿಂದ ಶಾಲೆಯಲ್ಲೂ ಇತರರು ನವೀನ್ ನನ್ನು ಚುಡಾಯಿಸುತ್ತಿದ್ರು ಅಂತಾ ಶಿಕ್ಷಕರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...