alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಂಡೋಮ್ ನಲ್ಲಿ ತಯಾರಾಗುತ್ತೆ ವೈನ್

cuba-facts_1491288849

ರಮ್ ಹಾಗೂ ಸಿಗಾರ್ ಗೆ ಕೆರಿಬಿಯನ್ ದೇಶ ಕ್ಯೂಬಾ ವಿಶ್ವದಲ್ಲಿಯೇ ಪ್ರಸಿದ್ಧಿ ಪಡೆದಿದೆ. ಇಲ್ಲಿ ಸಾಕಷ್ಟು ವಿಶೇಷತೆಗಳಿವೆ. ಕುಟುಂಬವೊಂದು ಕಾಂಡೋಮ್ ನಲ್ಲಿ ತಯಾರಿಸುವ ವೈನ್ ಗೆ ಭಾರೀ ಬೇಡಿಕೆ ಇದೆ.

ಇಲ್ಲಿ ನೆಲೆಸಿರುವ Orestes Estevez ಕುಟುಂಬ ಕಾಂಡೋಮ್ ನಲ್ಲಿ ವೈನ್ ತಯಾರಿ ಮಾಡುತ್ತಿದೆ. ವೈನ್ ತಯಾರಿಸಲು ದ್ರಾಕ್ಷಿ, ಸೀಬೆ ಹಣ್ಣು, ಶುಂಠಿ ಜೊತೆಗೆ ಕಾಂಡೋಮ್ ಬಳಸುತ್ತಾರೆ. ಬೇರೆ ಬೇರೆ ಪ್ಲೇವರ್ ಗಾಗಿ ಕಾಂಡೋಮ್ ಬಳಸಲಾಗುತ್ತದೆ. ಹಣ್ಣುಗಳನ್ನು ಮಿಶ್ರ ಮಾಡಿದ ನಂತ್ರ ಬೇರೆ ಬೇರೆ ಫ್ಲೇವರ್ ಗಾಗಿ ಕಾಂಡೋಮ್ ಬಳಸಿ ಫಾರ್ಮೇಷನ್ ಮಾಡಲಾಗುತ್ತದೆ.

ಹಣ್ಣು ಕೊಳೆತು ಅನಿಲ ಬಿಡುಗಡೆಯಾದಂತೆ ಬಾಟಲಿಯ ಬಾಯಿಗೆ ಕಟ್ಟಿರುವ ಕಾಂಡೋಮ್ ಊದಿಕೊಳ್ಳುತ್ತದೆ. ಆಗ ಅದರ ವಾಸನೆ ವೈನ್ ಮಿಶ್ರಣಕ್ಕೆ ಸೇರುತ್ತದೆ. ಕಾಂಡೋಮ್ ಚಿಕ್ಕದಾದ್ರೆ ವೈನ್ ಸಿದ್ಧವೆಂದು ಅರ್ಥ.

Orestes Estevez ನ ಇಡೀ ಕುಟುಂಬ ಈ ವ್ಯವಹಾರದಲ್ಲಿ ತೊಡಗಿಕೊಂಡಿದೆ. ಮಿಲಿಟರಿಯಲ್ಲಿ ನೌಕರಿ ಮಾಡಿ ಬಂದ Oroetus ಈ ವ್ಯಾಪಾರ ಶುರುಮಾಡಿದ್ದಾರೆ. ಅವರಿಗೆ ಪತ್ನಿ, ಮಗ ಹಾಗೂ ಸಹಾಯಕರು ನೆರವಾಗುತ್ತಾರೆ. ಅವರ ವೈನ್ ಗೆ ಬಹಳ ಬೇಡಿಕೆ ಇದೆಯಂತೆ. ವೈನ್ ಶಾಪ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಬೇಡಿಕೆ ಹೆಚ್ಚಿದ್ದು, ದಿನಕ್ಕೆ 50 ಬಾಟಲಿ ಮಾರಾಟವಾಗುತ್ತೆ ಎನ್ನುತ್ತಾರೆ Oroetus.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...