alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯ ಕಣ್ಣು ನೋಡಿ ವೈದ್ಯರೇ ಬೆಚ್ಚಿಬಿದ್ರು..!

eye

ಬ್ರಿಟನ್ ನಲ್ಲಿ 67 ವರ್ಷದ ಮಹಿಳೆಯ ಕಣ್ಣುಗಳನ್ನು ನೋಡಿ ವೈದ್ಯರೇ ದಂಗಾಗಿದ್ದಾರೆ. ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಲು ಮುಂದಾದ ವೈದ್ಯರಿಗೆ, ಆಕೆಯ ಕಣ್ಣಿನಲ್ಲಿ 27 ಕಾಂಟಾಕ್ಟ್ ಲೆನ್ಸ್ ಗಳು ಸಿಕ್ಕಿಕೊಂಡಿರೋದು ಗೋಚರಿಸಿದೆ.

ಕಳೆದ 35 ವರ್ಷಗಳಿಂದ್ಲೂ ಆಕೆಗೆ ದೃಷ್ಟಿಯ ಸಮಸ್ಯೆ ಇತ್ತು. ತಿಂಗಳಿಗೊಮ್ಮೆ ಬಳಸಿ ಬಿಸಾಡಬಲ್ಲ ಲೆನ್ಸ್ ಗಳನ್ನು ಆಕೆ ಹಾಕಿಕೊಳ್ತಾ ಇದ್ಲು. ಆದ್ರೆ ಕಣ್ಣುಗಳ ರೆಗ್ಯುಲರ್ ತಪಾಸಣೆಗೆ ಹೋಗುತ್ತಿರಲಿಲ್ಲ. ಆದ್ರೆ ಲೆನ್ಸ್ ಗಳು ಇದ್ದಕ್ಕಿದ್ದಂತೆ ಕಾಣೆಯಾಗ್ತಾ ಇವೆ ಅನ್ನೋದು ಅವಳ ಅರಿವಿಗೇ ಬಂದಿರಲಿಲ್ಲ. ಕಣ್ಣುಗಳಲ್ಲೂ ಯಾವುದೇ ಸಮಸ್ಯೆ ಕಾಣಿಸಿರಲಿಲ್ಲ.

ಹೀಗೆ ಒಟ್ಟು 27 ಲೆನ್ಸ್ ಗಳು ಅವಳ ಒಂದು ಕಣ್ಣಿನಲ್ಲಿ ಸಿಕ್ಕಿಹಾಕಿಕೊಂಡಿದ್ದವು. ಮೊದಲು 17 ಲೆನ್ಸ್ ಗಳನ್ನು ವೈದ್ಯರು ಹೊರತೆಗೆದಿದ್ರು. ನಂತರ ಇನ್ನೂ 10 ಲೆನ್ಸ್ ಗಳು ಕಣ್ಣಿನಲ್ಲೇ ಪತ್ತೆಯಾಗಿವೆ. ಇಷ್ಟೊಂದು ಲೆನ್ಸ್ ಗಳು ಸಿಕ್ಕಿಹಾಕಿಕೊಂಡಿದ್ರೂ ಆಕೆಯ ಕಣ್ಣಿಗೆ ಯಾವುದೇ ರೀತಿಯ ಹಾನಿಯಾಗದೇ ಇರುವುದು ನಿಜಕ್ಕೂ ಆಶ್ಚರ್ಯದಾಯಕ ಅಂತಾ ವೈದ್ಯರು ಹೇಳಿದ್ದಾರೆ.

ಸಾಮಾನ್ಯವಾಗಿ ಲೆನ್ಸ್ ಸಿಕ್ಕಿಹಾಕಿಕೊಂಡ್ರೆ ನೋವು, ಕಿರಿಕಿರಿ ಉಂಟಾಗುತ್ತದೆ. ಕಣ್ಣುಗಳಲ್ಲಿ ನೀರು ಸುರಿಯಬಹುದು, ಜೊತೆಗೆ ಇನ್ನಿತರ ಸಮಸ್ಯೆಗಳು ಕೂಡ ಕಾಣಿಸಿಕೊಳ್ಳುತ್ತವೆ. ಆದ್ರೆ ಅದ್ಯಾವ ಸಮಸ್ಯೆಯೂ ಮಹಿಳೆಗೆ ಎದುರಾಗಿರಲಿಲ್ಲ. ಸದ್ಯ ಲೆನ್ಸ್ ಗಳನ್ನೆಲ್ಲಾ ವೈದ್ಯರು ಹೊರತೆಗೆದಿದ್ದು, ಕಣ್ಣಿನ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...