alex Certify
ಕನ್ನಡ ದುನಿಯಾ       Mobile App
       

Kannada Duniya

ಅವನ ಸಂಗೀತ ಕಚೇರಿಗೆ ಪೊಲೀಸರು ಮೂರ್ಛೆ ಹೋಗೋದೊಂದೇ ಬಾಕಿ…!

ಅಮೆರಿಕದ ಲಾಸ್ ಏಂಜಲಿಸ್ ನ  ಪೊಲೀಸರನ್ನ ಕಳ್ಳಕಾಕರೂ ಇಷ್ಟೊಂದು ಕಾಡಿಸಿರಲಿಲ್ಲ. ಅಷ್ಟರ ಮಟ್ಟಿಗೆ ಸ್ವಯಂ ಘೋಷಿತ ಪಾಪ್ ಸಿಂಗರ್ ಒಬ್ಬ ಹೆದ್ದಾರಿ ಟ್ರಾಫಿಕ್ ಪೊಲೀಸರನ್ನ ಕಾಡಿಬಿಟ್ಟಿದ್ದಾನೆ. ಅವನ ಹೆಸರು ಅಲೆಕ್ಸಾಂಡರ್ ಡನ್. ಸ್ಟೇಜ್ ನೇಮ್ ಡೆಫ್ರಿ. ಪಾಪ್ ಸಂಗೀತ ಪ್ರೇಮಿ.

ವಿಪರೀತ ಪಾಪ್ ಸಂಗೀತದ ಹುಚ್ಚಿರೋ ಈತ ಮಾಡಿದ್ದೇನು ಗೊತ್ತಾ..? ಒಂದು ಅಂಡರ್ವೇರ್ ತೊಟ್ಟು ಕೈನಲ್ಲಿ ಮೈಕ್ ಹಿಡಿದುಕೊಂಡು ರೋಡಿಗಿಳಿದೇಬಿಟ್ಟ. ಲಾಸ್ ಏಂಜಲೀಸ್ ನ ಫ್ರೀವೇ ಎಕ್ಸಿಟ್ ಸಿಗ್ನಲ್ ಬಳಿ ಗಾಳಿ ತುಂಬಿ ಸಿದ್ಧಮಾಡಿಕೊಳ್ಳಬಹುದಾದ ಸ್ಟೇಜ್ ಒಂದನ್ನ ರೆಡಿ ಮಾಡಿಕೊಂಡು ಅದರ ಮೇಲೆ ತನ್ನ ಕಚೇರಿ ಶುರುಮಾಡೇಬಿಟ್ಟ.

ಇವನು ಸೃಷ್ಟಿಸಿದ ಅವಾಂತರದಿಂದ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗಿಹೋಯ್ತು. ಸಿಗ್ನಲ್ ಬಳಿಯಿಂದ ಇವನ ಸಂಗೀತ ಕಚೇರಿಯನ್ನ ಶಿಫ್ಟ್ ಮಾಡೋಕೆ ಪೊಲೀಸರು ಏನೇ ಪ್ರಯತ್ನ ಪಟ್ಟರು ಭೂಪ ಕದಲಲೇ ಇಲ್ಲ. ಹತ್ತಿರ ಹೋದ ಪೊಲೀಸರಿಗೆ ಸಖತ್ತಾಗೇ ಆಟ ಆಡಿಸಿಬಿಟ್ಟಿದ್ದ. ಕೊನೆಗೆ ಅಗ್ನಿಶಾಮಕದಳದ ಸಿಬ್ಬಂದಿ ಕೂಡ ಬಂದು ಇವನನ್ನ ಬಂಧಿಸೋಕೆ ನೆರವಾದರು.

ಬೆಳಗ್ಗೆ 8 ಗಂಟೆಗೆ ಶುರುವಾದ ಇವನ ಸಂಗೀತ ಕಚೇರಿಯನ್ನ ನಿಲ್ಲಿಸಿ ಇವನನ್ನ ಪೊಲೀಸರು ಬಂಧಿಸೋ ವೇಳೆಗೆ ಬೆಳಗ್ಗೆ 11.30 ಆಗಿಬಿಟ್ಟಿತ್ತು. ಪೊಲೀಸರು ಬಂಧಿಸೋ ಸಮಯದಲ್ಲೂ ಬ್ಯಾಕ್ ಫ್ಲಿಪ್ ಮಾಡಿ ಅವರನ್ನೇ ಕಂಗಾಲು ಮಾಡಿಬಿಟ್ಟಿದ್ದ ಡೆಫ್ರಿ. ಸದ್ಯ ಇವನ ಕಚೇರಿ ರೋಡ್ ನಿಂದ ಪೊಲೀಸ್ ಸ್ಟೇಷನ್ ಗೆ ಶಿಫ್ಟ್ ಆಗಿದೆ. ಅಲ್ಲಿ ಪೊಲೀಸರು ಇವನನ್ನ ಹೇಗೆ ಸಹಿಸಿಕೊಳ್ತಿದ್ದಾರೋ ಏನೋ…?

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...