alex Certify
ಕನ್ನಡ ದುನಿಯಾ       Mobile App
       

Kannada Duniya

ನಾಪತ್ತೆಯಾಗಿದ್ದ ಹಡಗು 9 ವರ್ಷಗಳ ಬಳಿಕ ಪತ್ತೆ…!

‘ಸ್ಯಾಮ್ ರಟುಲಾಂಗಿ ಪಿಬಿ 1600’ ಎಂಬ ಸರಕು ಹಡಗೊಂದು ಸರಿಸುಮಾರು ದಶಕದ ಹಿಂದೆ ಸಮುದ್ರದ ಮಧ್ಯೆ ನಾಪತ್ತೆಯಾಗಿತ್ತು. ಕಳೆದ ವಾರ ಆ ಹಡಗು ಪತ್ತೆಯಾಗಿದೆ, ಆದರೆ ಅದರಲ್ಲಿ ಸರಕೂ ಇರಲಿಲ್ಲ, ಸಿಬ್ಬಂದಿಯೂ ಇರಲಿಲ್ಲ.

2009ರಲ್ಲಿ ಪೆಸಿಫಿಕ್ ಸಮುದ್ರದಲ್ಲಿ ನಾಪತ್ತೆಯಾಗಿದ್ದ ಹಡಗು ಈಗ ಪತ್ತೆಯಾಗಿರುವುದು ದಕ್ಷಿಣ ಮ್ಯಾನ್ಮಾರ್ ಕರಾವಳಿ ತೀರದಲ್ಲಿ. ಸರಕು ಇಲ್ಲದ, ಸಿಬ್ಬಂದಿಯೂ ಇಲ್ಲದ ಈ ಹಡಗನ್ನು ಕಂಡು ಸ್ಥಳೀಯ ಮೀನುಗಾರರಿಗೆ ಆಶ್ಚರ್ಯ, ಭಯವೆರಡೂ ಏಕಕಾಲಕ್ಕಾಯಿತು. ಅವರು ನೀಡಿದ ಮಾಹಿತಿಯನ್ನಾಧರಿಸಿ ನೌಕಾದಳದ ಯೋಧರು ಬಂದು ಪರಿಶೀಲಿಸಿದರು.

ಈ ದೈತ್ಯ ಹಡಗು 177 ಮೀಟರ್‌ಗಳಷ್ಟು ಉದ್ದ ಹಾಗೂ 27.91 ಮೀಟರ್‌ಗಳಷ್ಟು ಅಗಲವಿದ್ದು, 26,510 ಟನ್‌ಗಳಷ್ಟು ತೂಕ ಹೊಂದಿದೆ.
ಚಲಾಯಿಸಲು ಸಿಬ್ಬಂದಿಯೇ ಇಲ್ಲದೆ ಇಷ್ಟೊಂದು ದೊಡ್ಡ ಹಡಗು ಬಂದಿದ್ದಾದರೂ ಹೇಗೆ ಎಂಬುದೇ ನಿಗೂಢವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...