alex Certify
ಕನ್ನಡ ದುನಿಯಾ       Mobile App
       

Kannada Duniya

ಅದೃಷ್ಟವಂತೆ ಅಂದ್ರೆ ಈಕೆಯೇ ನೋಡಿ

ನಾರ್ತ್ ಕೆರೊಲಿನಾ: ಅದೃಷ್ಟ ಬಂದ್ರೆ ಹೀಗೆ ಬರಬೇಕು. ಅಮೆರಿಕದ ನಾರ್ತ್ ಕೆರೊಲಿನಾದ ಮಹಿಳೆಯೊಬ್ಬರಿಗೆ ಲಾಟರಿಯಲ್ಲಿ 10,000 ಡಾಲರ್ ಬಹುಮಾನ ಬಂದಿದೆ. ಅದೇ ದಿನ ಮತ್ತೊಂದು ಲಾಟರಿಯಲ್ಲಿ 1 ದಶಲಕ್ಷ ಡಾಲರ್ ಬಹುಮಾನ ಬಂದಿದ್ದು, ಆಕೆಯ ಆನಂದಕ್ಕೆ ಪಾರವೇ ಇಲ್ಲದಂತಾಗಿದೆ.

ಮಹಿಳೆ ಕಿರಾಣಿ ಅಂಗಡಿಯೊಂದರಲ್ಲಿ ಡೈಮಂಡ್ ಡಾಜ್ಲರ್ ಟಿಕೆಟ್ ಖರೀದಿಸಿದ್ದು, ಅದರಲ್ಲಿ 10,000 ಡಾಲರ್ ಬಹುಮಾನ ಬಂದಿದೆ. ಹಣ ಪಡೆದುಕೊಂಡು ಹೋಗುವ ಸಂದರ್ಭದಲ್ಲಿ ಆಕೆ ಸೂಪರ್ ಮಾರ್ಕೇಟ್ ನಲ್ಲಿ ಖರೀದಿಸಿದ್ದ ಲಾಟರಿಗೆ 1 ಮಿಲಿಯನ್ ಡಾಲರ್ ಬಹುಮಾನ ಬಂದಿದೆ.

ತೆರಿಗೆಯನ್ನೆಲ್ಲಾ ಕಡಿತ ಮಾಡಿ ಆಕೆಗೆ ಹಣ ನೀಡಲಾಗಿದ್ದು, ಹಣ ತೆಗೆದುಕೊಂಡು ಮನೆಗೆ ಹೋದ ಮಹಿಳೆ ತನ್ನ ಮೂವರು ಮಕ್ಕಳಿಗೆ ಹಂಚಿಕೆ ಮಾಡುವುದಾಗಿ ಹೇಳಿದ್ದಾಳೆ.

2 ನೇ ಲಾಟರಿಯಲ್ಲಿ ಬಹುಮಾನ ಬಂದಿರುವ ವಿಚಾರವನ್ನು ಪತಿ ತಿಳಿಸಿದಾಗ, ಆಕೆಗೆ ನಂಬಲು ಸಾಧ್ಯವಾಗಿರಲಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...