alex Certify
ಕನ್ನಡ ದುನಿಯಾ       Mobile App
       

Kannada Duniya

ತರಕಾರಿ ತರಲು ಹೋದವಳೀಗ ‘ಕೋಟ್ಯಾಧಿಪತಿ’…!

ಕೆಲವೊಮ್ಮೆ ಅದೃಷ್ಟ ಕೈಹಿಡಿದಾಗ‌ ಏನು ಬೇಕಾದರೂ ಆಗಬಹುದು ಎನ್ನುವುದಕ್ಕೆ ಈ ಮಹಿಳೆ ತಾಜಾ ಉದಾಹರಣೆಯಾಗಿದ್ದು, ಕೋಸು ತರಲು ಹೋಗಿ ಒಂದೂವರೆ ಕೋಟಿ ಹಣ ಗಳಿಸಿದ್ದಾಳೆ.

ಅಚ್ಚರಿ ಎನಿಸಿದರೂ ಇದು ಸತ್ಯ. ಅಮೆರಿಕಾದ ಮೇರಿಲ್ಯಾಂಡ್ ಭಾಗದ ವನ್ನೀಸಾ ಎನ್ನುವ ಮಹಿಳೆ ತರಕಾರಿ ತರಲೆಂದು ಅಂಗಡಿಗೆ ಹೋಗಿದ್ದಾಗ, ಖರೀದಿಸಿದ ಲಾಟರಿ ಇದೀಗ ಈಕೆಗೆ 2,22,500 ಡಾಲರ್ ಮೊತ್ತದ ಬಹುಮಾನ‌ ದೊರೆಯುವಂತೆ ಮಾಡಿದೆ.

ಈ ಬಗ್ಗೆ ಮಾತನಾಡಿರುವ ಆಕೆ, ಗ್ರೋಟೌನ್‌ನಲ್ಲಿರುವ ಜೇಂಟ್ ಸ್ಟೋರ್ ಎನ್ನುವ‌ ಅಂಗಡಿಯಲ್ಲಿ ಎಲೆಕೋಸನ್ನು ತರುವಂತೆ ತಂದೆ ಹೇಳಿದರು. ಅಲ್ಲಿಗೆ ಹೋದಾಗ ಸುಮ್ಮನೆ, ಸ್ಪಿನ್ ಸ್ಕ್ರಾಚ್ ಲಾಟರಿಯನ್ನು ಪಡೆದೆ. ಮನೆಗೆ ಬಂದು ಕಾರ್ಡ್ ನೋಡಿದಾಗ ಒಂದು ಲಕ್ಷದಿಂದ ಐದು ಲಕ್ಷದವರೆಗೆ ಗೆಲ್ಲುವ ಸ್ಪಿನ್ ಕಾರ್ಡ್‌ನಲ್ಲಿ ಆಡುವ ಅವಕಾಶವಿತ್ತು ಎಂದಿದ್ದಾಳೆ.

ಅದೃಷ್ಟದ ಗಾಲಿಯನ್ನು ತಿರುಗಿಸಿದಾಗ ಅದರಲ್ಲಿ 2.25 ಲಕ್ಷ ಡಾಲರ್ ಗೆದ್ದಿದ್ದು, ನಾನು ಡಿಸ್ನಿ ಲ್ಯಾಂಡ್ ಪ್ರವಾಸ ಹೋಗಿ, ಬಾಕಿ‌ ಹಣವನ್ನು ಉಳಿತಾಯ ಮಾಡುತ್ತೇನೆ ಎಂದಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...