alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯಾರ್ಥಿಯೊಂದಿಗೆ ಸರಸವಾಡಿದ ಶಿಕ್ಷಕಿ ಅರೆಸ್ಟ್

ಕ್ಯಾಂಡಲ್ ಲೈಟ್ ರೂಮ್ ನಲ್ಲಿ ವಿದ್ಯಾರ್ಥಿಯೊಂದಿಗೆ ಸರಸವಾಡಲು ಸಿದ್ಧತೆ ಮಾಡಿಕೊಂಡಿದ್ದ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಕ್ಲಾಹೋಮಾದ ಯುಕೊನ್ ಯುಕೊನ್ ಪ್ರೌಢಶಾಲೆಯ ಶಿಕ್ಷಕಿ ಹಂಟರ್ ಡೇ(22) ಬಂಧಿತ ಆರೋಪಿ.

ಶಾಲೆಯ ವಿದ್ಯಾರ್ಥಿಯನ್ನು ಬೆದರಿಸಿ ಆತನೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದ ಹಂಟರ್ ಡೇ, ನಂತರದಲ್ಲಿ ಅನೇಕ ಸಲ ಆತನೊಂದಿಗೆ ಸರಸವಾಡಿದ್ದಳು. ಮೊಬೈಲ್ ನಲ್ಲಿ ಆತನಿಗೆ ನಗ್ನ ಚಿತ್ರ, ಸಂದೇಶಗಳನ್ನು ಕಳುಹಿಸುತ್ತಿದ್ದಳು.

ಹೀಗೆ ಆತನನ್ನು ತನ್ನ ಮನೆಗೆ ಕರೆಸಿಕೊಂಡು ಸರಸವಾಡಲು ಸಿದ್ಧತೆ ನಡೆಸಿದ್ದಾಳೆ. ಕ್ಯಾಂಡಲ್ ಲೈಟ್ ರೂಂನಲ್ಲಿ ಆಕೆ ವಿದ್ಯಾರ್ಥಿಗಾಗಿ ಕಾಯುತ್ತಿದ್ದಾಗಲೇ ದಾಳಿ ಮಾಡಿ ಬಂಧಿಸಲಾಗಿದೆ.

ವಿದ್ಯಾರ್ಥಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಸಂಬಂಧ ಹೊಂದಿದ್ದಳು ಎಂದು ಕೆನಡಾದ ಕೌಂಟಿ ಶೆರಿಫ್ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾರ್ಥಿಯ ಪೋಷಕರಿಗೆ ಆತನ ನಡವಳಿಕೆ ಬಗ್ಗೆ ಅನುಮಾನ ಬಂದು ಫೋನ್ ಗಮನಿಸಿದಾಗ ಈ ಸಂಗತಿ ಬಯಲಾಗಿದೆ.

ವಿದ್ಯಾರ್ಥಿಗೆ ನನ್ನ ಅರೆಬೆತ್ತಲೆ ಚಿತ್ರ ಕಳಿಸಿದ್ದೆ. ಆತನೂ ತನ್ನ ಚಿತ್ರಗಳನ್ನು ತನಗೆ ಕಳಿಸಿದ್ದಾಗಿ ಹಂಟರ್ ಡೇ ವಿಚಾರಣೆಯಲ್ಲಿ ತಿಳಿಸಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...