alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ವೀಟ್ 16 ತರ ಕಾಣುವ ಈಕೆ ವಯಸ್ಸು ಕೇಳಿದ್ರೆ ಚಕಿತರಾಗ್ತೀರಾ

Zhang-Tingxuan-15

ಫೋಟೋದಲ್ಲಿರುವ ಈಕೆ ನೋಡಿ ವಯಸ್ಸು ಹೇಳಿ ಅಂದ್ರೆ ತಟ್ಟನೆ 18-20 ವರ್ಷ ಇರಬಹುದು ಅಂತೀರಾ. ಹೆಚ್ಚು ಅಂದ್ರೆ 22 ಆಗಿರಬಹುದಷ್ಟೆ ಅಂತಾ ಹೇಳ್ತೀರಾ. ಆದ್ರೆ ನಿಮ್ಮ ಉತ್ತರ ಖಂಡಿತವಾಗಿಯೂ ತಪ್ಪು.

ಸ್ವೀಟ್ 16 ಹಾಗಿರುವ ಇವಳು ಹುಡುಗಿ ಅಲ್ಲ. ಮಹಿಳೆ. ಎರಡು ಮಕ್ಕಳ ತಾಯಿ. ತೈವಾನ್ ನಲ್ಲಿ ವಾಸಿಸುವ ಜಾಂಗ್ ತಿಂಗಜುವಾನ ಈಕೆ ಹೆಸರು. ಈಕೆಯನ್ನು ನೋಡಿದ ಯಾರೂ ಇವಳ ವಯಸ್ಸು 25 ಅಥವಾ 30 ಅಲ್ಲ, ಬದಲಾಗಿ 44 ವರ್ಷ ಅಂತಾ ಹೇಳಿದ್ರೆ ನಂಬೋದಿಲ್ಲ.

ಇಷ್ಟೇ ಅಲ್ಲ ತಿಂಗಜುವಾನ ಎರಡು ಮಕ್ಕಳ ತಾಯಿ. ಆದ್ರೆ ಈಕೆಯ ಮುಖ ನೋಡಿ ಈಕೆ ಎರಡು ಮಕ್ಕಳ ತಾಯಿ ಅಂತಾ ಯಾರಿಗೂ ಹೇಳಲು ಸಾಧ್ಯವಿಲ್ಲ. ತಿಂಗಜುವಾನ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತನ್ನ ಜಿಮ್ ಫೋಟೋವನ್ನು ಸಾಮಾಜಿಕ ಜಾಲತಾಣಗಳಿಗೆ ಹಾಕಿ ತಿಂಗಜುವಾ ಮೊದಲ ಬಾರಿ ಚರ್ಚೆಗೆ ಬಂದಿದ್ದಳು.Zhang-Tingxuan

ಏರೋಬಿಕ್ಸ್ ಮಾಡುತ್ತಿರುವ ತಿಂಗಜುವಾನಾ 49 ಕೆಜಿ ಇಳಿಸಿಕೊಂಡಳಂತೆ. ಹಾಗೆ ಆಕೆಯ ದೇಹ ರಚನೆ ಕೂಡ ಸರಿಯಾಯ್ತಂತೆ. ಆಕೆಗೆ 13 ವರ್ಷದ ಮಗ ಹಾಗೂ 9 ವರ್ಷದ ಮಗಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...