alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಶಾರ್ಕ್ ದಾಳಿ ವಿಡಿಯೋ

ಶಾರ್ಕ್ ದಾಳಿ ಮಾಡಿದಂತೆ ಅನಿಸಿ ವ್ಯಕ್ತಿಯೊಬ್ಬ ಭಯಬಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಾಷಿಂಗ್ಟನ್ ಡಿಸಿಯಲ್ಲಿ ಇಂಟರ್ ನ್ಯಾಷನಲ್ ಸ್ಪೈ ಮ್ಯೂಸಿಯಂಗೆ ಭೇಟಿ ನೀಡಿದ್ದ ವ್ಯಕ್ತಿಯೊಬ್ಬ ಗ್ಲಾಸ್ ಹೊರ ಭಾಗದಲ್ಲಿದ್ದ ಶಾರ್ಕ್ ಗಳನ್ನು ವೀಕ್ಷಿಸಿದ್ದಾನೆ.

ಆತನ ಸಮೀಪದಲ್ಲೇ ಹಾದು ಹೋದ ಶಾರ್ಕ್ ಕಂಡು ಗಾಜನ್ನು ಮುಟ್ಟುತ್ತಾನೆ. ಹೀಗೆ ಮುಟ್ಟುವ ಸಂದರ್ಭದಲ್ಲೇ ವೇಗವಾಗಿ ಬಂದ ಶಾರ್ಕ್ ಒಂದು ಗಾಜಿಗೆ ಡಿಕ್ಕಿ ಹೊಡೆದಿದ್ದು, ಗ್ಲಾಸ್ ಬಿರುಕು ಬಿಟ್ಟಂತಾಗಿ ಭಯಗೊಂಡ ವ್ಯಕ್ತಿ ಹಿಂದಕ್ಕೆ ಹಾರಿ ಬಿದ್ದಿದ್ದಾನೆ.

ಈ ವಿಡಿಯೋವನ್ನು ಅಪಾರ ಸಂಖ್ಯೆಯ ಮಂದಿ ಶೇರ್ ಮಾಡಿದ್ದು, ಅದಕ್ಕಿಂತ ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

ಅಂದ ಹಾಗೇ ಶಾರ್ಕ್ ಗಳನ್ನು ವೀಕ್ಷಿಸುವ ಈ ಸ್ಥಳ ತಮಾಷೆಯ ಸ್ಥಳವಾಗಿದೆ. ಗ್ಲಾಸ್ ಮುಟ್ಟುವ ಸಂದರ್ಭದಲ್ಲಿ ನಕಲಿ ಶಾರ್ಕ್ ದಾಳಿ ಮಾಡಿ ಗ್ಲಾಸ್ ಬಿರುಕು ಬಿಟ್ಟಂತಾಗುತ್ತದೆ.

ಇದನ್ನು ಅರಿಯದ ವ್ಯಕ್ತಿ ನಿಜಕ್ಕೂ ಶಾರ್ಕ್ ಬಂದಿತೆಂದು ಭಾವಿಸಿ ಭಯದಿಂದ ಬಿದ್ದಿದ್ದಾನೆ. ಅದು ಜಾಲತಾಣದಲ್ಲಿ ವೈರಲ್ ಆಗಿದೆ.

 

Touch at your own riskYouTube link: https://youtu.be/uzIaOHZeTDUTo use this video in a commercial player or in broadcasts, please email licensing@storyful.com

Posted by Casey Peck on Sunday, October 22, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...