alex Certify
ಕನ್ನಡ ದುನಿಯಾ       Mobile App
       

Kannada Duniya

6 ವರ್ಷದ ಬಾಲಕಿ ಮೇಲೆ ಆಕ್ವೇರಿಯಂನಲ್ಲಿದ್ದ ಶಾರ್ಕ್ ದಾಳಿ

ಚೀನಾದ ಶಾಂಘೈನ ಮಾಲ್‌ ಒಂದರ ಅಕ್ವೇರಿಯಂನಲ್ಲಿದ್ದ ಶಾರ್ಕ್‌, 6 ವರ್ಷದ ಬಾಲಕಿಯ ಮೇಲೆ ದಾಳಿ ಮಾಡಿದೆ. ಕುಟುಂಬದೊಂದಿಗೆ ಮಾಲ್‌ ಸುತ್ತಲು ಬಂದಿದ್ದ ಬಾಲಕಿ, ಅಕ್ವೇರಿಯಂ ಹತ್ತಿರ ನಿಂತಿದ್ದಾಳೆ. ಈ ವೇಳೆ ಶಾರ್ಕ್‌ ಬಾಲಕಿಯ ಮೇಲೆರಗಿದೆ. ಈ ಘಟನೆಯಲ್ಲಿ ಬಾಲಕಿಯ ಕೈಗೆ ಗಂಭೀರ ಗಾಯಗಳಾಗಿದೆ.

ಶಾರ್ಕ್‌ ಬಾಲಕಿಯ ಮೇಲೆ ದಾಳಿ ನಡೆಸುವ ದೃಶ್ಯ, ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಬಾಲಕಿಯನ್ನು ಕ್ಸೈಯೋ ಲೀ ಎಂದು ಗುರುತಿಸಲಾಗಿದೆ. ಬಾಲಕಿ ಅಕ್ವೇರಿಯಂ ನೋಡುತ್ತಿದ್ದ ವೇಳೆ, ಒಮ್ಮೆಲೇ ಶಾರ್ಕ್‌ ದಾಳಿ ಮಾಡಿದೆ. ಈ ಭಯಾನಕ ದೃಶ್ಯದ ಸಿಸಿ ಟಿವಿ ಪೂಟೇಜ್‌ ಸಿಕ್ಕಿದೆ. ಬಾಲಕಿಯ ಕೈ, ಅಂಗೈನಲ್ಲಿ ಆಳವಾದ ಗಾಯಗಳಾಗಿದ್ದು, ಮೂಳೆಗೂ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.

ಘಟನೆ ಸಂಬಂಧ ಮಾಲ್‌ ಅಧಿಕಾರಿಗಳು, ಬಾಲಕಿ ಅಕ್ವೇರಿಯಂ ನೀರಿಗೆ ಕೈ ಇಳಿಬಿಟ್ಟಿದ್ದಾಳೆ ಎಂದು ಆರೋಪಿಸಿದ್ದಾರೆ. ಆದರೆ ಕುಟುಂಬ ಸದಸ್ಯರು ಈ ಆರೋಪವನ್ನು ತಳ್ಳಿಹಾಕಿದ್ದಾರೆ. ಅಕ್ವೇರಿಯಂ ನೀರನ್ನು ಮುಟ್ಟುವುದು ನಿಷಿದ್ಧವಾಗಿದ್ದು, ಅಪಾಯಕಾರಿ ಮೀನುಗಳಿರುವ ಬಗ್ಗೆ ಎಚ್ಚರಿಕೆ ಸಂದೇಶ ಹಾಕಲಾಗಿದೆ. ಪೋಷಕರು ಮಕ್ಕಳ ಬಗ್ಗೆ ಎಚ್ಚರಿಕೆ ವಹಿಸುವಂತೆಯೂ ಸಂದೇಶವಿದೆ ಎಂದು ಮಾಲ್‌ ಆಡಳಿತ ಮಂಡಳಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...