alex Certify
ಕನ್ನಡ ದುನಿಯಾ       Mobile App
       

Kannada Duniya

ದುಬೈ NRI ಬಳಿಯಿದೆ 1,60,000 ಮೌಲ್ಯದ 2000 ರೂ. ನೋಟುಗಳು

nri

500 ಮತ್ತು 2000 ರೂಪಾಯಿಯ ಹೊಸ ನೋಟು ಪಡೆಯಲು ದೇಶದಾದ್ಯಂತ ಜನರು ಗಂಟೆಗಟ್ಟಲೆ ಕ್ಯೂನಲ್ಲಿ ನಿಂತು ಪರದಾಡ್ತಿದ್ದಾರೆ. ಅಂಥದ್ರಲ್ಲಿ ದುಬೈನಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯಮಿ ಎಂ.ಕೆ.ಲತೀಫ್ 2000 ರೂಪಾಯಿ ನೋಟುಗಳನ್ನು ಸಲೀಸಾಗಿ ಸಂಪಾದಿಸಿದ್ದಾರೆ.

ಅವರ ಬಳಿಯೀಗ 1,60,000 ರೂಪಾಯಿ ಮೌಲ್ಯದ 2000 ರೂ. ನೋಟುಗಳಿವೆ. ಎನ್ ಆರ್ ಐ ಲತೀಫ್ ಅವರಿಗೆ ದೆಹಲಿ, ಮುಂಬೈ, ಕೇರಳ ಎಲ್ಲಾ ಕಡೆ ಸ್ನೇಹಿತರಿದ್ದಾರಂತೆ. ಎಲ್ಲಾ ಕಡೆಯಿಂದ ಸ್ವಲ್ಪ ಸ್ವಲ್ಪ ನೋಟುಗಳನ್ನು ಪಡೆದುಕೊಂಡಿದ್ದಾರೆ. ವಿಮಾನ ನಿಲ್ದಾಣದಲ್ಲಿ ಕೂಡ ಹಣ ತರಲು ಅವರ ಸ್ನೇಹಿತರೇ ನೆರವಾಗಿದ್ದಾರಂತೆ, ಎಲ್ಲರೂ ತಲಾ 25,000 ರೂಪಾಯಿಯಂತೆ ಇಟ್ಟುಕೊಂಡು ಒಟ್ಟು 1,60,000 ರೂಪಾಯಿಯನ್ನು ದುಬೈಗೆ ತಂದಿದ್ದಾರೆ. ದುಬೈನಲ್ಲಿ ಪರಿಚಯಸ್ಥರಿಗೆಲ್ಲ ಲತೀಫ್ ಹೊಸ ನೋಟನ್ನು ಕೊಟ್ಟಿದ್ದಾರಂತೆ.

ಲತೀಫ್ ಅವರಿಗೆ ಫ್ಯಾನ್ಸಿ ನಂಬರ್ ನ ನೋಟುಗಳನ್ನು ಸಂಗ್ರಹಿಸುವ ಹವ್ಯಾಸವಿದೆ. ಗಣ್ಯಾತಿಗಣ್ಯರ ಹುಟ್ಟಿದ ದಿನಾಂಕದ ನಂಬರ್ ಇರುವ ನೋಟನ್ನು ಸಂಗ್ರಹಿಸಿ ಗಿಫ್ಟ್ ಮಾಡಿದ್ದಾರೆ. ಕೇರಳ ಸಿಎಂ ಪಿನರಾಯಿ ವಿಜಯನ್, ಓಮನ್ ಚಾಂಡಿ, ಜೇಸುದಾಸ್, ಚೇತನ್ ಭಗತ್, ಮುಮ್ಮುಟ್ಟಿ ಸೇರಿದಂತೆ ಹಲವರಿಗೆ ಗಿಫ್ಟ್ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಅವರ ಜನ್ಮ ದಿನಾಂಕದ ಸೀರಿಯಲ್ ನಂಬರ್ ಇರುವ ನೋಟ್ ಸಹ ಲತೀಫ್ ಅವರ ಬಳಿಯಿದೆಯಂತೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...