alex Certify
ಕನ್ನಡ ದುನಿಯಾ       Mobile App
       

Kannada Duniya

ಜೈಲು ಪಾಲಾಗಿರುವ ಮಾಜಿ ಪ್ರಧಾನಿಗೆ ಸಿಕ್ಕಿರುವ ಸೌಲಭ್ಯಗಳೇನು ಗೊತ್ತಾ?

ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್ ಮತ್ತವರ ಪುತ್ರಿ ಮರಿಯಮ್ ಶರೀಫ್ ಜೈಲು ಪಾಲಾಗಿದ್ದಾರೆ. ಲಂಡನ್ ನಿಂದ ಶುಕ್ರವಾರ ಪಾಕಿಸ್ತಾನದಲ್ಲಿ ಬಂದಿಳಿದ ಅವರುಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.

ನವಾಜ್ ಶರೀಫ್ ಮತ್ತವರ ಪುತ್ರಿಗೆ ನ್ಯಾಯಾಲಯ ಜೈಲು ಶಿಕ್ಷೆ ಪ್ರಕಟಿಸಿದ ವೇಳೆ ಲಂಡನ್ ನಲ್ಲಿದ್ದ ಅವರುಗಳು ತಾವಾಗಿಯೇ ಪಾಕಿಸ್ತಾನಕ್ಕೆ ಬಂದು ಬಂಧನಕ್ಕೊಳಗಾಗಿದ್ದಾರೆ.

ಪಾಕಿಸ್ತಾನದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು, ಬಂಧನಕ್ಕೊಳಗಾದರೆ ಸಾರ್ವಜನಿಕರ ಅನುಕಂಪದ ಮೇಲೆ ಮತ್ತೆ ಅಧಿಕಾರ ಹಿಡಿಯಬಹುದೆಂಬ ಲೆಕ್ಕಾಚಾರ ನವಾಜ್ ಶರೀಫ್ ಅವರ ನಡೆಯ ಹಿಂದಿದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಈ ಮಧ್ಯೆ ಬಂಧನಕ್ಕೊಳಗಾಗಿ ರಾವಲ್ಪಿಂಡಿಯ ಕಾರಾಗೃಹದಲ್ಲಿರುವ ನವಾಜ್ ಶರೀಫ್ ಅವರಿಗೆ ಬಿ ದರ್ಜೆಯ ಸೌಲಭ್ಯ ನೀಡಲಾಗಿದ್ದು, ಅವರ ಕೋಣೆಯಲ್ಲಿ ಒಂದು ಮಂಚ, ಕುರ್ಚಿ ಹಾಗೂ ಒಂದು ಲಾಟೀನು ಮಾತ್ರ ನೀಡಲಾಗಿದೆ. ನವಾಜ್ ಶರೀಫ್ ಅವರು ಟಿ.ವಿ., ಎ.ಸಿ., ಫ್ರಿಡ್ಜ್ ಹಾಗೂ ದಿನಪತ್ರಿಕೆಗಳನ್ನು ಸ್ವಂತ ಖರೀದಿಸಿ ಬಳಕೆ ಮಾಡಬಹುದಾದರೂ ಇದಕ್ಕೆ ಜೈಲಾಧಿಕಾರಿಗಳ ಅನುಮತಿ ಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...