alex Certify
ಕನ್ನಡ ದುನಿಯಾ       Mobile App
       

Kannada Duniya

ಈ ದರೋಡೆ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ!

ಚೀನಾದ ಶಾಂಘೈನಲ್ಲಿ ನಡೆದ ದರೋಡೆ ಯತ್ನ ಪ್ರಕರಣವೊಂದರ ವಿಡಿಯೋ ಈಗ ವೈರಲ್ ಆಗಿದೆ. ದರೋಡೆಕೋರ ಈ ಕೃತ್ಯದಲ್ಲಿ ಪಳಗಿಲ್ಲ ಅನ್ನೋದಂತೂ ಈ ವಿಡಿಯೋದಲ್ಲಿ ಸ್ಪಷ್ಟವಾಗಿದೆ. ಯಾಕಂದ್ರೆ ಕದಿಯೋ ಭರದಲ್ಲಿ ಆತ ತನ್ನ ಸಹಚರನ ಮೇಲೆ ದಾಳಿ ನಡೆಸಿದ್ದಾನೆ.

ರಾತ್ರಿ ಇಬ್ಬರು ಮುಸುಕುಧಾರಿಗಳು ಆಗಮಿಸಿದ್ರು. ಗಾಜಿನ ಬಾಗಿಲನ್ನು ಮುರಿದು ಒಳನುಗ್ಗಲು ಯತ್ನಿಸಿದ್ದಾರೆ. ಒಬ್ಬ ದುಷ್ಕರ್ಮಿ ತನ್ನ ಕೈಯಲ್ಲಿದ್ದ ಶಸ್ತ್ರಾಸ್ತ್ರವನ್ನು ಬಾಗಿಲಿನತ್ತ ಜೋರಾಗಿ ಎಸೆದಿದ್ದಾನೆ. ಅದೇ ಸಮಯಕ್ಕೆ ಇನ್ನೊಬ್ಬ ದರೋಡೆಕೋರ ಅಡ್ಡ ಬಂದಿದ್ದ.

ಇವನು ಎಸೆದಿದ್ದ ಆಯುಧ ಸಹಚರನ ಮುಖಕ್ಕೆ ತಗುಲಿದೆ. ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಬಳಿಕ ಇನ್ನೋರ್ವ ದರೋಡೆಕೋರ ಆತನನ್ನು ಉಪಚರಿಸೋದ್ರಲ್ಲಿ ಬ್ಯುಸಿಯಾದ. ಫೆಬ್ರವರಿ 14ರಂದು ಮಧ್ಯರಾತ್ರಿ ಈ ಘಟನೆ ನಡೆದಿದೆ. 12 ಮಿಲಿಯನ್ ಜನರು ಈ ವಿಡಿಯೋ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...