alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ನಲ್ಲಿ ಭಗತ್ ಸಿಂಗ್‌ ರ 111 ನೇ ಜನ್ಮ ದಿನಾಚರಣೆ

ಹುತಾತ್ಮ ಭಗತ್ ಸಿಂಗ್ ಅವರ 111ನೇ ಜನ್ಮ ದಿನಾಚರಣೆಯನ್ನು ಪಾಕಿಸ್ತಾನದ ಲಾಹೋರ್‌ನಲ್ಲಿ ಶುಕ್ರವಾರ ಆಚರಿಸಲಾಯಿತು. ಅವಿಭಜಿತ ಭಾರತವನ್ನು ಒಂದು ಸ್ವತಂತ್ರ ರಾಷ್ಟ್ರವನ್ನಾಗಿ ಕಾಣುವ ಕನಸು ಕಂಡಿದ್ದ ಹುತಾತ್ಮನ ಸ್ಮರಣೆ ಮಾಡಲಾಯಿತು.

ಭಗತ್ ಸಿಂಗ್ ರ ಜನ್ಮಭೂಮಿಯನ್ನು ಎರಡು ಹೋಳಾಗಿ ತುಂಡರಿಸಬಾರದಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು. ಲಾಹೋರ್ ಹೈಕೋರ್ಟ್‌ ಬಾರ್ ಅಸೋಸಿಯೇಶನ್‌ ಮತ್ತು ಸುಪ್ರೀಂ ಕೋರ್ಟ್‌ನ ವಕೀಲರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಭಗತ್ ಸಿಂಗ್ ನೆನಪಲ್ಲಿ ಕೇಕ್ ಕತ್ತರಿಸಲಾಯಿತು.

ಉಭಯ ದೇಶಗಳ ನಡುವಿನ ಇತ್ತೀಚಿನ ವೈಷಮ್ಯವು ಹುತಾತ್ಮನ ಜನ್ಮ ವರ್ಷಾಚರಣೆ ಮಾಡದೇ ಇರಲು ಕಾರಣವಾಗಬಾರದು ಎಂದು ಹಿರಿಯ ವಕೀಲರು ತಮ್ಮ ಭಾಷಣದಲ್ಲಿ ಹೇಳಿದರು. ಪಾಕಿಸ್ತಾನದಲ್ಲಿನ ಭಗತ್ ಸಿಂಗ್ ಮೆಮೋರಿಯಲ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಇಮ್ತಿಯಾಜ್ ರಶೀದ್ ಖುರೇಷಿ ಈ ಕಾರ್ಯಕ್ರಮ ಆಯೋಜಿಸಿದ್ದರು.

1931ರ ಮಾರ್ಚ್ 23ರಂದು ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದ ಸ್ಥಳವಾದ ಲಾಹೋರ್‌ನ ಶದ್‌ಮನ್ ಚೌಕ್‌ಗಾಗಿ ಇಮ್ತಿಯಾಜ್ ಹಾಗೂ ಅವರ ತಂದೆ, ಪಾಕ್ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಬ್ದುಲ್ ರಷೀದ್ ಖುರೇಷಿ ಅವರು ಹೋರಾಟ ನಡೆಸುತ್ತಿದ್ದಾರೆ. ಪಾಕಿಸ್ತಾನ ಸರ್ಕಾರ ಈ ಹುತಾತ್ಮನ ಸ್ಮರಣೆಗಾಗಿ ಅಂಚೆಚೀಟಿ ಹಾಗೂ ನಾಣ್ಯಗಳನ್ನು ಹೊರತರಬೇಕೆಂದೂ ಇವರು ಒತ್ತಾಯಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...