alex Certify
ಕನ್ನಡ ದುನಿಯಾ       Mobile App
       

Kannada Duniya

ಅಶ್ಲೀಲ ಶಿಕ್ಷಣ ನೀಡ್ತಿದೆ ಈ ವಿಶ್ವವಿದ್ಯಾಲಯ..!

29906170001_4232942144001_thumb-Buzz60video3264725952571285576

ಒಂದೆಡೆ ಪೋರ್ನ್ ವಿಡಿಯೋ ಮೂಲಕ ಯುವ ಜನರು ದಾರಿ ತಪ್ಪುತ್ತಿದ್ದಾರೆ ಎಂಬ ಕೂಗು ಕೇಳಿ ಬರುತ್ತಿದ್ದರೆ ಮತ್ತೊಂದೆಡೆ ವಿಶ್ವವಿದ್ಯಾಲಯವೊಂದು ಪೋರ್ನ್ ಗೆ ಸಂಬಂಧಿಸಿದ ಶಿಕ್ಷಣ ನೀಡುವ ಕೋರ್ಸ್ ನಡೆಸುವ ಮೂಲಕ ಹುಬ್ಬೇರುವಂತೆ ಮಾಡಿದೆ.

ಹದಿ ಹರೆಯದವರಿಗೆ ಲೈಂಗಿಕ ಶಿಕ್ಷಣ ನೀಡುವ ಮೂಲಕ ಯುವ ಜನತೆಯನ್ನು ಕೀಳು ಅಭಿರುಚಿಯಿಂದ ಹೊರ ತರಲು ಈಗಾಗಲೇ ಹಲವು ಶಿಕ್ಷಣ ಸಂಸ್ಥೆಗಳು ಅಧ್ಯಯನ ವ್ಯವಸ್ಥೆಯನ್ನು ರೂಪಿಸಿವೆ. ಆದರೆ ಅಮೆರಿಕದ ಕಾರ್ನೆಜಿಯಾ ಮೆಲ್ಲೋನ್ ವಿಶ್ವವಿದ್ಯಾಲಯದಲ್ಲಿ ‘ಇಂಟರ್ನೆಟ್ ರೆಸಿಸ್ಟೆನ್ಸ್’ ಎಂಬ ಪೋರ್ನ್ ಸಂಬಂಧಿತ ವಿಷಯವನ್ನೂ ಪರಿಚಯಿಸಲಾಗಿದ್ದು, ಇದಕ್ಕೆ ಸಂಬಂಧಿತ ವಿಷಯದಲ್ಲಿ ಉತ್ತಮ ತರಬೇತಿ ನೀಡಲಾಗುತ್ತದೆಯಂತೆ.

ಈ ಕುರಿತು ವಿವಾದ ಎದ್ದಿದ್ದರೂ ಈಗಾಗಲೇ ಹಲವು ವಿದ್ಯಾರ್ಥಿಗಳು ಈ ವಿಷಯದ ಅಧ್ಯಯನಕ್ಕೆ ಆಸಕ್ತಿ ತೋರಿದ್ದು, ಪ್ರವೇಶವನ್ನೂ ಪಡೆದಿದ್ದಾರೆ. ಹಾಗಾಗಿ ಇನ್ನು ಮುಂದೆ ವಿದ್ಯಾರ್ಥಿಗಳು ಉಳಿದೆಲ್ಲ ಸಬ್ಜೆಕ್ಟ್ ಗಿಂತ ಈ ವಿಷಯದಲ್ಲಿ ಹೆಚ್ಚು ಅಂಕ ಗಳಿಸಲು ಶ್ರಮಿಸಿದರೂ ಆಶ್ಚರ್ಯವಿಲ್ಲ ಎನ್ನುತ್ತಿದ್ದಾರೆ ಹಲವರು. ಒಟ್ಟಿನಲ್ಲಿ ಹದಗೆಡುತ್ತಿರುವ ಸಮಾಜವನ್ನು ಸರಿದಾರಿಗೆ ತರಲು ಯತ್ನಿಸುವುದನ್ನು ಬಿಟ್ಟು ಇಂತಹ ಅಧ್ಯಯನದ ಮೂಲಕ ವಿಶ್ವವಿದ್ಯಾಲಯವೊಂದು ಸಮಾಜದ ಸ್ವಾಸ್ಥ್ಯ ಮತ್ತಷ್ಟು ಹಾಳು ಮಾಡಹೊರಟಿರುವುದು ಮಾತ್ರ ದುರ್ದೈವ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...