alex Certify
ಕನ್ನಡ ದುನಿಯಾ       Mobile App
       

Kannada Duniya

’50 ರ ನಂತ್ರವೂ ಮಹಿಳೆಯರಿಗೆ ಸೆಕ್ಸ್ ಬೇಕು’

old_age_romance3_1501151606_618x347

ಮಹಿಳೆಯರಿಗೆ ಮುಟ್ಟು ನಿಲ್ಲುತ್ತಿದ್ದಂತೆ ಇಲ್ಲ 40 ವರ್ಷ ದಾಟುತ್ತಿದ್ದಂತೆ ಲೈಂಗಿಕ ಆಸಕ್ತಿ ಕಡಿಮೆಯಾಗುತ್ತೆ ಎಂಬ ಕಲ್ಪನೆಯಿದೆ. ಆದ್ರೆ ಇತ್ತೀಚೆಗೆ ನಡೆದ ಒಂದು ಪ್ರಕರಣದ ವೇಳೆ ನ್ಯಾಯಾಲಯ 50 ದಾಟಿದ ಮೇಲೂ ಮಹಿಳೆಯರಿಗೆ ಸೆಕ್ಸ್ ಅವಶ್ಯಕ ಎಂಬ ವಿಷ್ಯವನ್ನು ಹೇಳಿದೆ.

ಮಹಿಳೆಯರಿಗೆ 50 ವರ್ಷದ ದಾಟಿದ ನಂತ್ರವೂ ಸೆಕ್ಸ್ ಅವಶ್ಯಕ ಎಂದು ಐರೋಪ್ಯ ಮಾನವ ಹಕ್ಕುಗಳ ನ್ಯಾಯಾಲಯ ತೀರ್ಪು ನೀಡಿದೆ. ಪೋರ್ಚುಗಲ್ ನ್ಯಾಯಾಲಯ ನೀಡಿದ್ದ ತೀರ್ಪಿನ ವಿರುದ್ಧ ಈ ತೀರ್ಪು ನೀಡಿದೆ.

ಮಹಿಳೆ ಆಸ್ಪತ್ರೆಯೊಂದರ ವಿರುದ್ಧ ದೂರು ನೀಡಿದ್ದಳು. ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿದ ನಂತ್ರ ಸೆಕ್ಸ್ ಜೀವನ ಕಷ್ಟವಾಗಿದೆ. ಹಾನಿ ತುಂಬಿಕೊಡಬೇಕೆಂದು 1995ರಲ್ಲಿ ದೂರು ನೀಡಿದ್ದಳು. ಆಗ ಮಹಿಳೆಗೆ 50 ವರ್ಷ ವಯಸ್ಸಾಗಿತ್ತು. 2014ರಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದ ಪೋರ್ಚುಗಲ್ ಕೋರ್ಟ್, 50 ವರ್ಷ ವಯಸ್ಸಿನಲ್ಲಿ ಸೆಕ್ಸ್ ಜೀವನಕ್ಕೆ ಅಷ್ಟು ಮಹತ್ವವಿರುವುದಿಲ್ಲವೆಂದು ತೀರ್ಪು ನೀಡಿತ್ತು.

72 ವರ್ಷದ ಮಾರಿಯಾ ಇವೋನೆ ಕಾರ್ವಾಲ್ಹೋ ಡಿಸೋಜಾ ಪೋರ್ಚುಗಲ್ ನೀಡಿದ್ದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಳು. ಫ್ರಾನ್ಸ್ ಮೂಲದ ಐರೋಪ್ಯ ಮಾನವ ಹಕ್ಕುಗಳ ನ್ಯಾಯಾಲಯ ಮಹಿಳೆ ಪರ ತೀರ್ಪು ನೀಡಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...