alex Certify
ಕನ್ನಡ ದುನಿಯಾ       Mobile App
       

Kannada Duniya

ಐರ್ಲ್ಯಾಂಡ್ ನಲ್ಲಿ ಅನ್ಯಗ್ರಹ ಜೀವಿ ಪತ್ತೆ…?

ಕಳೆದ ಹಲವು ವರ್ಷಗಳಿಂದ ‌ಅನ್ಯಗ್ರಹ ಜೀವಿಗಳಿರುವ‌ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದರೂ, ಅದಕ್ಕೊಂದು ತಾರ್ಕಿಕ ಅಂತ್ಯ ಮಾತ್ರ‌ ಸಿಕ್ಕಿಲ್ಲ‌. ಆದರೀಗ ಐರಿಷ್ ಏವಿಯೇಷನ್ ಸಂಸ್ಥೆ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳ ಪೈಲೆಟ್ ಗಳ‌‌ ಮಾತಿನಿಂದ ಮತ್ತೆ ಏಲಿಯನ್ ಗಳ‌ ಚರ್ಚೆಗೆ ಜೀವ ಬಂದಿದೆ.

ಹೌದು, ಹಲವು ಖಾಸಗಿ‌ ವಿಮಾನಯಾನ ಸಂಸ್ಥೆಗಳ ಪೈಲೆಟ್ ಗಳು ಐರ್ ಲ್ಯಾಂಡ್ ಭಾಗದಲ್ಲಿ, ಶುಕ್ರವಾರದಂದು ಅಲ್ಲಿನ ಸ್ಥಳೀಯ ಕಾಲಮಾನ 6.47 ರ ಸುಮಾರಿಗೆ ಭಾರಿ ಬೆಳಕಿನ ವಸ್ತು ಹಾರಾಟ ನಡೆಸಿರುವ ಬಗ್ಗೆ ವರದಿ ಮಾಡಿರುವುದರಿಂದ ತನಿಖೆ ನಡೆಸಲು‌ ಸರ್ಕಾರ ಮುಂದಾಗಿದೆ.

ಪೈಲೆಟ್ ಗಳ ಪ್ರಕಾರ, ಯಾವುದೋ‌ ಒಂದು ಬೆಳಕಿನ ವಸ್ತು ಹಾರಾಟ ನಡೆಸಿದ್ದು,‌ ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿತ್ತು‌ ಎಂದಿದ್ದಾರೆ. ಆರಂಭದಲ್ಲಿ ಈ‌ ವಸ್ತುವನ್ನು‌ ವಾಯುಪಡೆಗೆ ಸೇರಿದ‌ ವಸ್ತು ಎಂದುಕೊಂಡಿದ್ದಾರೆ. ಆದರೆ ಆ ಸಮಯದಲ್ಲಿ ವಾಯುಸೇನೆ ಯಾವುದೇ ಹಾರಾಟ ನಡೆಸಿಲ್ಲ‌ ಎಂದು ಸ್ಪಷ್ಟಪಡಿಸಿರುವುದರಿಂದ, ಅನ್ಯಗ್ರಹ‌ ಜೀವಿ ಎಂದು ಕೆಲವರು ಭಾವಿಸಿದ್ದಾರೆ.

ಪೈಲೆಟ್ ಒಬ್ಬರ ಪ್ರಕಾರ, ಅತಿವೇಗದಲ್ಲಿದ್ದ ಆ ವಸ್ತು ಮೊದಲಿಗೆ ನಮ್ಮ ವಿಮಾನದ ಎಡಭಾಗದಲ್ಲಿತ್ತು. ಆದರೆ ಕೆಲವೇ ಕ್ಷಣದಲ್ಲಿ ಉತ್ತರ ಭಾಗಕ್ಕೆ ವೇಗವಾಗಿ ಹಾರಿತು ಎಂದಿದ್ದಾರೆ. ಆದರೆ ಈ‌ ಬಗ್ಗೆ ಐರಿಷ್ ಏವಿಯೇಷನ್ ವಕ್ತಾರರು ಪ್ರತಿಕ್ರಿಯಿಸಿದ್ದು, ಸದ್ಯ ಈ ವಸ್ತುವಿನ‌ ಬಗ್ಗೆ ತನಿಖೆ ನಡೆಯುತ್ತಿದೆ ಎಂದಷ್ಟೆ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...