alex Certify
ಕನ್ನಡ ದುನಿಯಾ       Mobile App
       

Kannada Duniya

ಅರಣ್ಯ ಪ್ರದೇಶದಲ್ಲಿ ವಿಮಾನಾಪಘಾತ: ಹಲವರ ಸಾವಿನ ಶಂಕೆ

ಸ್ವಿಡ್ಜರ್ರ್ಲೆಂಡ್ ನ ಜ್ಯೂರಿಚ್ ಬಳಿ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ವಿಮಾನಾಪಘಾತದಲ್ಲಿ ಹಲವು ಮಂದಿ ಸಾವನ್ನಪ್ಪಿದ್ದಾರೆ ಅಂತ ಹೇಳಲಾಗ್ತಿದೆ.

ಶನಿವಾರ ಬೆಳಗಿನ ವೇಳೆಯಲ್ಲಿ ಲಘು ವಿಮಾನ ಪತನವಾಗಿದ್ದರಿಂದ ಹಲವರ ಜೀವ ಹಾನಿಯಾಗಿರಬಹುದು ಅಂತ ಶಂಕಿಸಲಾಗಿದೆ. ವಿಮಾನ ಪತನವಾದ ನಂತರ ಆ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಡ್ಗಿಚ್ಚಿನಿಂದಾಗಿ ಸಾವಿನ ಪ್ರಮಾಣ ಹೆಚ್ಚಾಗಿದೆ ಎನ್ನಲಾಗಿದೆ.

ಜ್ಯೂರಿಚ್ ನ ದಟ್ಟ ಅರಣ್ಯದಲ್ಲಿ ವಿಮಾನ ಅಪಘಾತ ಸಂಭವಿಸಿದ್ದು ರಕ್ಷಣಾ ಕಾರ್ಯಕ್ಕೆ ತೆರಳಿದ್ದ ತಂಡ ಹೆಲಿಕ್ಯಾಪ್ಟರ್ ಮೂಲಕ ಕಾಡ್ಗಿಚ್ಚಿನ ಮೇಲೆ ನೀರನ್ನು ಸುರಿಸಿ ಆನಂತರ ಕಾರ್ಯಾಚರಣೆಗಿಳಿದಿದೆ.

ರಕ್ಷಣಾ ಕಾರ್ಯದ ಜೊತೆಗೆ ಕಾಡ್ಗಿಚ್ಚನ್ನೂ ಆರಿಸೋಕೆ ಸಿಬ್ಬಂದಿ ಪ್ರಯತ್ನಿಸುತ್ತಿರೋದ್ರಿಂದ ಘಟನೆಯ ಬಗ್ಗೆ ಮಾಹಿತಿ ಸಂಗ್ರಹಣೆ ಕಾರ್ಯ, ಮಡಿದವರ ಗುರುತು ಪತ್ತೆ ಕಾರ್ಯವೂ ವಿಳಂಬವಾಗುತ್ತಿದೆ. ಈ ಕಾರ್ಯಾಚರಣೆ ಸಂಪೂರ್ಣವಾಗಿ ಮುಗಿದ ಬಳಿಕವಷ್ಟೆ ಮಾಹಿತಿ ನೀಡೋದಾಗಿ ಪೊಲೀಸರು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...