alex Certify
ಕನ್ನಡ ದುನಿಯಾ       Mobile App
       

Kannada Duniya

`ವಿಷ ನೀಡಿ ಸಾಯಿಸ್ತೇನೆ’: ಮಗುವಿನ ಹೋಂ ವರ್ಕ್ ನೋಟ್ ನೋಡಿ ದಂಗಾದ ತಾಯಿ

ನಿಮ್ಮ ಮಗುವಿನ ಹೋಂ ವರ್ಕ್ ಪಟ್ಟಿಯಲ್ಲಿ `ವಿಷ ನೀಡಿ ನಿಮ್ಮ ಇಡೀ ಕುಟುಂಬವನ್ನು ನಾಶ ಮಾಡ್ತಾನೆ’ ಎಂದು ಬರೆದಿದ್ದರೆ ಹೇಗಾಗಬೇಡ? ಒಮ್ಮೆ ಭಯವಾಗೋದು ಮಾಮೂಲಿ. ಬ್ರಿಟನ್ ನಲ್ಲಿ ನಡೆದ ಘಟನೆ ಕೂಡ ಮೊದಲು ತಾಯಿ ಆಘಾತಗೊಳ್ಳಲು ಕಾರಣವಾಗಿತ್ತಂತೆ.

ಮಗುವಿನ ತಾಯಿ ಸ್ಟೆಫಾನಿ ಫರ್ನೊಕ್ಸ್ ಈ ವಿಷ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ. ಮಗಳ ಹೋಂ ವರ್ಕ್ ನಕಲಿನ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿ, ಇದು ಭಯಗೊಳ್ಳುವ ಸಂಗತಿಯಾ ಎಂದು ಪ್ರಶ್ನೆ ಮಾಡಿದ್ದಾಳೆ.

ಮಾರ್ಚ್ ನಲ್ಲಿ ನನಗೆ ವಿಷ ಸಿಕ್ಕಿತ್ತು. ಅದ್ರಿಂದ ನಾನು ನಿನ್ನನ್ನು ಕೊಲೆ ಮಾಡ್ತೇನೆ ಎಂದು ಹೋಂ ವರ್ಕ್ ನಲ್ಲಿ ಬರೆದಿತ್ತು. ಶಾಲಾ ಪುಸ್ತಕದಲ್ಲಿ ವಿಷ ಸೇರಿದಂತೆ ಕೆಲ ಶಬ್ಧಗಳನ್ನು ನೀಡಿದ್ದರು. ಆ ಎಲ್ಲ ಶಬ್ಧ ಜೋಡಿಸಿ ಒಂದು ವಾಕ್ಯ ಮಾಡಬೇಕಿತ್ತು. 7 ವರ್ಷದ ಮಗಳು ಈ ರೀತಿ ವಾಕ್ಯ ರಚನೆ ಮಾಡಿರುವುದು ತಾಯಿಗೆ ಆರಂಭದಲ್ಲಿ ಭಯ ಹುಟ್ಟಿಸಿತ್ತು.

ಸ್ಟೆಫಾನಿ ಇದನ್ನು ಪತಿಗೆ ಹೇಳಿದ್ದಾಳೆ. ಪತಿ ಇದ್ರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡ. ವಿಷದ ಅರ್ಥ ಆಕೆಗೆ ಗೊತ್ತಿಲ್ಲ ಎಂದಿದ್ದಾನೆ. ನಂತ್ರ ಇದನ್ನು ಫೇಸ್ಬುಕ್ ಗೆ ಹಾಕಿದ್ದಾಳೆ ಸ್ಟೆಫಾನಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...