alex Certify
ಕನ್ನಡ ದುನಿಯಾ       Mobile App
       

Kannada Duniya

7 ವರ್ಷದ ಪುಟಾಣಿ ಈಗ ಟೆಕ್ ಕಂಪನಿಯ ಉದ್ಯೋಗಿ

girl

ಉದ್ಯೋಗ ಕೇಳ್ಕೊಂಡು ಗೂಗಲ್ ಸಿಇಓಗೆ ಭಾವನಾತ್ಮಕ ಪತ್ರ ಬರೆದಿದ್ದ 7 ವರ್ಷದ ಪುಟ್ಟ ಬಾಲೆ ನೆನಪಿರಬೇಕಲ್ಲ? ಆಕೆ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾಳೆ. ಬಾಲಕಿ ಕ್ಲೋಯ್ ಬ್ರಿಡ್ಜ್ವಾಟರ್ ಈಗ ಟೆಕ್ ಕಂಪನಿಯೊಂದರ ಉದ್ಯೋಗಿ. ‘ಕನೋ’ ಎಂಬ ಕಂಪನಿಯೊಂದಲ್ಲಿ ಪ್ರಾಡಕ್ಟ್ ಟೆಸ್ಟರ್ ಆಗಿ ಕ್ಲೋಯ್ ಕೆಲಸ ಗಿಟ್ಟಿಸಿಕೊಂಡಿದ್ದಾಳೆ.

ಆಕೆಯ 5 ವರ್ಷದ ಸಹೋದರಿ ಕೂಡ ಅದೇ ಸಂಸ್ಥೆಯನ್ನು ಸೇರಿದ್ದಾಳೆ. ಕನೋ ಕಂಪನಿ ಮಕ್ಕಳಿಗಾಗಿ DIY ಕಂಪ್ಯೂಟರ್ ಕಿಟ್ ಗಳನ್ನು ತಯಾರಿಸುತ್ತದೆ. ಕಂಪನಿ ಮಾರುಕಟ್ಟೆಗೆ ಬಿಡುಗಡೆ ಮಾಡಲೆಂದೇ ತಯಾರಿಸಿದ ಎಲ್ಲಾ ಹೊಸ ಡಿವೈಸ್ ಗಳನ್ನು ಈ ಪ್ರಚಂಡ ಪುಟಾಣಿಗಳು ಪರೀಕ್ಷೆಗೆ ಒಳಪಡಿಸಲಿದ್ದಾರೆ.

lerrte

ಪ್ರತಿ ನಾಲ್ಕು ತಿಂಗಳಿಗೊಮ್ಮೆ ಕಂಪನಿಯ ಉಪಾಧ್ಯಕ್ಷರು ವಿಡಿಯೋ ಕಾಲ್ ಮೂಲಕ ಈ ಮಕ್ಕಳ ಜೊತೆ ಮಾತನಾಡ್ತಾರೆ. ಅವರ ಅನುಭವ, ಉತ್ಪನ್ನದಲ್ಲಿ ಯಾವ ರೀತಿ ಸುಧಾರಣೆ ಮಾಡಬಹುದು ಎಂಬೆಲ್ಲಾ ವಿಚಾರಗಳ ಬಗ್ಗೆ ಚರ್ಚಿಸುತ್ತಾರೆ.

ಈ ಹಿಂದೆ ಗೂಗಲ್ ಕಂಪನಿಯ ಸೆಟಪ್ ನೋಡಿ ಬಾಲಕಿ ಕ್ಲೋಯ್ ಬೆರಗಾಗಿದ್ಲು. ಕಚೇರಿಯೊಳಗೆ ಆರಾಮಾಗಿ ಕೂರಲು ಬೀನ್ ಬ್ಯಾಗ್, ಗೋ ಕಾರ್ಟ್, ಸ್ಲೈಡ್ಸ್ ಇವನ್ನೆಲ್ಲ ನೋಡಿ ತಾನೂ ಅಲ್ಲಿ ಕೆಲಸ ಮಾಡಬೇಕೆಂದುಕೊಂಡಿದ್ದ ಕ್ಲೋಯ್, ಗೂಗಲ್ ಸಿಇಓ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದ್ದಳು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...