alex Certify
ಕನ್ನಡ ದುನಿಯಾ       Mobile App
       

Kannada Duniya

ಮಜಕ್ಕಾಗಿ 17 ಮಹಿಳೆಯರ ಮೇಲೆ ಚಾಕು ದಾಳಿ ನಡೆಸಿದ್ದವನಿಗೆ ಈ ಶಿಕ್ಷೆ

ಪಾಕಿಸ್ತಾನದಲ್ಲಿ 17 ಮಹಿಳೆಯರ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ. ಅಪರಾಧಿ ಮಹಮ್ಮದ್ ಅಲಿ ಪ್ರತಿದಿನ ರಾತ್ರಿ ಕರೆಂಟ್ ತೆಗೆದ ಸಮಯದಲ್ಲಿ ಮಹಿಳೆಯರ ಮೇಲೆ ದಾಳಿ ನಡೆಸುತ್ತಿದ್ದ. ಒಂಟಿಯಾಗಿ ಹೋಗ್ತಿದ್ದ ಮಹಿಳೆ ಮೇಲೆ ಚಾಕುವಿನಿಂದ ದಾಳಿ ನಡೆಸುತ್ತಿದ್ದ.

2016ರಲ್ಲಿ ಆಸ್ಪತ್ರೆಗೆ ಹೋಗ್ತಿದ್ದ ಮಹಿಳೆ ಮೇಲೆ ದಾಳಿ ನಡೆಸಿದ್ದ. ಆಕೆ ಜೊತೆಗಿದ್ದ ಇನ್ನೊಬ್ಬಳಿಗೂ ಗಾಯಗಳಾಗಿತ್ತು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಶುರುಮಾಡಿದ ಪೊಲೀಸ್ ಕೈಗೆ 2016ರಲ್ಲಿಯೇ ಮಹಮ್ಮದ್ ಅಲಿ ಸಿಕ್ಕಿಬಿದ್ದಿದ್ದ. ಮಹಿಳೆಯರ ಮೇಲೆ ಚಾಕುವಿನಿಂದ ದಾಳಿ ಮಾಡುವುದನ್ನು ಮಹಮ್ಮದ್ ಒಪ್ಪಿಕೊಂಡಿದ್ದಾನೆ.

ಮಹಿಳೆಯನ್ನು ದ್ವೇಷ ಮಾಡುವ ಈತ ಮಹಿಳೆಯರಿಗೆ ಚಾಕು ಇರಿದು ಆನಂದ ಪಡುತ್ತಿದ್ದನಂತೆ. ಪ್ರತಿದಿನ ರಾತ್ರಿ ಈತನ ಕಾರ್ಯಾಚರಣೆ ಶುರುವಾಗುತ್ತಿತ್ತಂತೆ. ಒಂದೇ ದಿನ ಮೂರು ಮಹಿಳೆಯರ ಮೇಲೆ ದಾಳಿ ಮಾಡಿದ ದಾಖಲೆಯೂ ಇದೆ. ತಪ್ಪೊಪ್ಪಿಕೊಂಡು ಜೈಲು ಸೇರಿದ್ದ ಆರೋಪಿಗೆ ಕೋರ್ಟ್ ಜೀವಾವಧಿ ಶಿಕ್ಷೆ ನೀಡಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...