alex Certify
ಕನ್ನಡ ದುನಿಯಾ       Mobile App
       

Kannada Duniya

ತಂದೆ ಶವದ ಜೊತೆ ಸೆಲ್ಫಿ ವಿವಾದಕ್ಕೆ ಕಾರಣವಾದ್ಲು ಮಾಡೆಲ್

ಸಾಮಾಜಿಕ ಜಾಲತಾಣದ ಅನೇಕರನ್ನು ಹುಚ್ಚರನ್ನಾಗಿ ಮಾಡ್ತಿದೆ. ಅಪಘಾತದ ವೇಳೆ ರಕ್ಷಣೆ ಮಾಡುವ ಬದಲು ಸೆಲ್ಫಿ ತೆಗೆಯುತ್ತ ನಿಂತಿದ್ದ ಅನೇಕ ಘಟನೆಗಳು ನಡೆದಿವೆ. ಸಾಮಾಜಿಕ ಜಾಲತಾಣದಲ್ಲಿ ಮಿಂಚಬೇಕೆಂಬ ಕಾರಣಕ್ಕೆ ಅನೇಕರು ಮಾನವೀಯತೆ ಮರೆಯುತ್ತಿದ್ದಾರೆ.

ಸರ್ಬಿಯಾದ ಮಾಡೆಲ್ ಹಾಗೂ ಹಾಡುಗಾರ್ತಿ ಝೆಲಿಕಾ ಲುಬ್ಬಾಸೆಕ್ ಕೂಡ ಇಂಥಹದ್ದೇ ವಿವಾದದಿಂದ ಸುದ್ದಿಗೆ ಬಂದಿದ್ದಾಳೆ. ಝೆಲಿಕಾ ಫೋಟೋವೊಂದು ವಿವಾದಕ್ಕೆ ಕಾರಣವಾಗಿದೆ.

ಸರ್ಬಿಯಾದ ಮಾಡೆಲ್ ಝೆಲಿಕಾ ತಂದೆ ಶವದ ಫೋಟೋ ಒಂದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ. ಆಸ್ಪತ್ರೆ ಬೆಡ್ ಮೇಲಿರುವ ತಂದೆ ಶವದ ಜೊತೆ ಝೆಲಿಕಾ ಸೆಲ್ಫಿ ತೆಗೆದಿದ್ದಾಳೆ. ತಂದೆ ಇನ್ನಿಲ್ಲವೆಂದು ಶೀರ್ಷಿಕೆ ಹಾಕಿದ್ದಾಳೆ.  ಝೆಲಿಕಾ ಫೋಟೋಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಇಂಥ ಸಂದರ್ಭದಲ್ಲಿಯಾದ್ರೂ ಶೋಕಿ ಬಿಟ್ಟುಬಿಡಿ ಎಂದು ಅನೇಕರು ಸಲಹೆ ನೀಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...